Important
Trending

100 ಕ್ಕೂ ಹೆಚ್ಚು ವಾಹನ ತಡೆದು ಎಚ್ಚರಿಕೆ: ನಾಳೆಯಿಂದ ಓಡಾಡಿದ್ರೆ ವಾಹನ್ ಸೀಝ್

ಹೊನ್ನಾವರ: ಅನಗತ್ಯವಾಗಿ ಓಡಾಟ ನಡೆಸುತ್ತಿರುವ ವಾಹನಗಳಿಗೆ ಹೊನ್ನಾವರ ಪೋಲಿಸರು ಬಿಸಿಮುಟ್ಟಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಹಾಗು ಮಾರಾಟಕ್ಕೆ ಸರಕಾರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಇದರ ಹೊರತಾಗಿ 10 ಗಂಟೆಯ ನಂತರ ಔಷಧಿ ಖರೀದಿ, ಬ್ಯಾಂಕ್ ವ್ಯವಹಾರವೆಂದು ಕುಂಟು ನೆಪ ಹೇಳಿ ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೋಲಿಸ್ ಇಲಾಖೆ ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಇಂದು ಬೆಳಿಗ್ಗೆ 11 ಘಂಟೆಗೆ ಸಿ.ಪಿ.ಐ ಶ್ರೀಧರ ಎಸ್ ಆರ್, ಪಿ.ಎಸ್.ಐ ಶಶಿಕುಮಾರ, ಪಿ.ಎಸ್.ಐ ಸವಿತ್ರಿ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ತಿರುಗಾಡುತ್ತಿದ್ದ 100ಕ್ಕು ಅಧಿಕ ವಾಹನಗಳನ್ನು ತಡೆದು ನಿಲ್ಲಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ,

ವಾಹನ ಸವಾರರಲ್ಲಿ ಈ ಕುರಿತು ಮಾತನಾಡಿದ ಸಿ.ಪಿ.ಐ ಶ್ರೀಧರ ಎಸ್ ಆರ್ ಅವರು ಕೋರೊನಾ ನಿಯಂತ್ರಣಕ್ಕಾಗಿ ಸರಕಾರ ಮೇ 24ರವರೆಗೆ ಲಾಕ್ಡೌನ್ ಮಾಡಲು ಆದೇಶಿಸಿದೆ. ಆದರೆ 10 ಗಂಟೆಯ ನಂತರವು ಸಹ ಹಾಸ್ಪಿಟಲ್, ಮೆಡಿಕಲ್ ಎಂದು ಕಾರಣ ನೀಡಿ ಓಡಾಟ ನಡೆಸುತ್ತಿರುವುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಾಳೆಯಿಂದ ಅನಾವಶ್ಯಕವಾಗಿ ತಿರುಗಾಟ ನಡೆಸಿದ್ದು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ತಡೆದು ಎಫ್.ಐ.ಆರ್ ದಾಖಲಿಸಿ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಕುಮಟಾ: ತಾಲೂಕಿನಲ್ಲಿ ಪೊಲೀಸರು ಅನವಶ್ಯಕವಾಗಿ ಓಡಾಡುವ ವಾಹನ ಸವಾರರಿಗೆ ಬಿಸಿಮುಟ್ಟಿಸುತ್ತಿದ್ದಾರೆ. ಕುಂಟುನೆಪ ಹೇಳಿ ಓಡಾಡುತ್ತಿದ್ದ ಸುಮಾರು 30 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಇದೇ ರೀತಿ ಮುಂದುವರಿದಲ್ಲಿ ಮತ್ತಷ್ಟು ಕಠಿಣ ಕಾನೂನು ಕ್ರಮ ಅನಿವಾರ್ಯ ಎಂದು ಪಿಎಸ್‌ಐ ಆನಂದ್ ಮೂರ್ತಿ ಎಚ್ಚರಿಸಿದ್ದಾರೆ.

ಅಂಕೋಲಾ: ರಾಜ್ಯದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ, ಪೇಟೆಯಲ್ಲಿ ನಾನಾ ಕಾರಣಗಳಿಂದ ಜನಸಂಚಾರ ಹೆಚ್ಚುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಸ್ವತಃ ತಾಲೂಕಾ ದಂಡಾಧಿಕಾರಿಗಳೇ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ ಅಪರೂಪದ ಘಟನೆ ಅಂಕೋಲಾದಲ್ಲಿ ಬೆಳಿಗ್ಗೆ ನಡೆದಿದೆ. ಕರೊನಾ ಕರ್ಫ್ಯೂ ಜಾರಿಯಲ್ಲಿದ್ದರೂ ಜನ ಜೀವನಕ್ಕೆ ತೊಂದರೆ ಆಗದಂತೆ ಜೀವನಾವಶ್ಯಕ ವಸ್ತುಗಳ ಖರೀದಿ ಹಾಗೂ ಮಾರಾಟಕ್ಕೆ ಬೆಳಗ್ಗೆ 6ರಿಂದ ಬೆಳಿಗ್ಗೆ 10ಘಂಟೆ ವರೆಗೆ ಅವಕಾಶ ಕಲ್ಪಿಸಲಾಗಿದೆ.

ರಿಯಾಯತಿ ಸಮಯಾವಕಾಶದ ನಂತರವೂ ಕೆಲ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದಾರೆ ಎನ್ನಲಾಗಿದ್ದು, ತಹಶೀಲ್ದಾರ ಹಾಗೂ ತಾಲೂಕಾ ದಂಡಾಕಾರಿಗಳಾದ ಉದಯ ಕುಂಬಾರ ಸ್ತತಃ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು.

ಪಟ್ಟಣದ ವಿವಿಧ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ತಹಶೀಲ್ದಾರರು, ರಸ್ತೆಯಂಚಿಗೆ ಕಂಡು ಬಂದ ಸಾರ್ವಜನಿಕರು, ವ್ಯಾಪಾರಸ್ಥರಿಗೆ ಬೆಳಗಿನ 10 ಗಂಟೆ ನಂತರ ಅನವಶ್ಯವಾಗಿ ಯಾರೂ ತಿರುಗಾಡದೇ ತಮ್ಮ ತಮ್ಮ ಮನೆಗೆ ತೆರಳುವಂತೆ ಸೂಚಿಸಿದರು. ಅಂದಾಜು 45 ನಿಮಿಷಗಳ ಕಾಲ ಅಲ್ಲಿಯೇ ಬೀಡು ಬಿಟ್ಟ ತಂಡ ನೋಡಿ ಹಲವು ವಾಹನ ಸವಾರರು ದಂಡದ ಬಿಸಿಯಿಂದ ತಪ್ಪಸಿಕೊಳ್ಳಲು ಅನ್ಯ ಮಾರ್ಗಕ್ಕೆ ಹೊರಳಿದರು ಎನ್ನಲಾಗಿದೆ. ಒಟ್ಟೂ 14 ದ್ವಿಚಕ್ರ ವಾಹನ ಸವಾರರಿಂದ ತಲಾ ರೂ 500 ರಂತೆ 7000 ರೂ ದಂಡ ವಸೂಲಿ ಮಾಡಲಾಗಿದೆ ಎಂದು ಪಿಎಸೈ ಪ್ರೇಮನಗೌಡ ಪಾಟೀಲ್ ತಿಳಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button