Focus News
Trending

ಅಂಕೋಲಾದಲ್ಲಿಂದು ಪಾಸಿಟಿವ್ ಕೇಸ್ 21: ಗುಣಮುಖ 11 : ದಾಖಲೆ ಪ್ರಮಾಣದಲ್ಲಿ ನಡೆಯುತ್ತಿರುವ ಸ್ಟ್ಯಾಬ್ ಟೆಸ್ಟ್ ತಾ.ಪಂ ಕೆ. ಡಿ.ಪಿ ಸಭೆಯಲ್ಲಿ Tho ಆಫೀಸ್ ಮತ್ತು ಬೆಳಸೆ ಪಿ.ಎಚ್.ಸಿ ದುರಸ್ತಿ ವಿಷಯ ಪ್ರಸ್ತಾಪ

ಅಂಕೋಲಾ ಜೂ 10: ತಾಲೂಕಿನಲ್ಲಿ ಗುರುವಾರ 21 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ,ಒಟ್ಟೂ 1 37ಪ್ರಕರರಣಗಳು ಸಕ್ರಿಯವಾಗಿದೆ.

ಸೋಂಕು ಮುಕ್ತರಾದ 11 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, ಅಂಕೋಲಾ (7), ಕಾರವಾರ (8), ಕುಮಟಾ (3, ಮಣಿಪಾಲ (1), ಮಂಗಳೂರು (3) ಸೇರಿ ಆಸ್ಪತ್ರೆಗಳಲ್ಲಿ ಒಟ್ಟು 22 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 12, ಹೋಂ ಐಸೋಲೇಶನ್ ನಲ್ಲಿ 103 ಜನರಿದ್ದಾರೆ. ಈ ವರೆಗೆ ಕೊವಿಡನಿಂದ ತಾಲೂಕಿನಲ್ಲಿ ಒಟ್ಟು 55 ಜನರು ಮೃತಪಟ್ಟಿದ್ದಾರೆ.

ಪಟ್ಟಣ ವ್ಯಾಪ್ತಿಯ ಪೊಲೀಸ್ ಚೆಕ್ ಪೋಸ್ಟ ಬಳಿ ಹಾಗೂ ಮತ್ತಿತರೆಡೆ 310ರ್ಯಾಟ್ ಮತ್ತು 419ಆರ್ಟಿ ಪಿಸಿಆರ್ ಸೇರಿದಂತೆ ಒಟ್ಟೂ 729 ಸ್ಟ್ಯಾಬ್ ಟೆಸ್ಟ್ ನಡೆಸಲಾಗಿದೆ.ಬುಧವಾರವೂ ದಾಖಲೆಯ 890 ಕೋವಿಡ್ ಟೆಸ್ಟ್ ನಡೆಸಲಾಗಿತ್ತು.

ತಾ.ಪಂ ನ ಜನಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಂಡಿದೆ., ಜಿ.ಪಂ. ಆಡಳಿತ ವಿಭಾಗದ ಉಪಕಾರ್ಯದರ್ಶಿ ನಾಗೇಶ ರಾಯ್ಕರ ( ತಾ.ಪಂ ಅಡಳಿತಾಧಿಕಾರಿ) ಅಂಕೋಲಾ ಇವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕಾ ಪಂಚಾಯತ ಸಾಮಾನ್ಯ ಸಭೆ ಕರೆಯಲಾಗಿತ್ತು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಮಳೆಗಾಲ ಮತ್ತಿತರ ದೃಷ್ಟಿಯಿಂದ ತಾಲೂಕಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ , ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಪಟ್ಟಣದ ಕೆ.ಸಿ ರಸ್ತೆ ಅಂಚಿಗೆ ಇರುವ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ದುರಸ್ಥಿ, ಸೋರುತ್ತಿರುವ ಬೆಳಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ ಕುರಿತು ಟಿ ಎಚ್ ಓ ಡಾ. ನಿತಿನ್ ಹೊಸ್ಮೇಲಕರ ಸಭೆಯ ಗಮನಕ್ಕೆ ತಂದಾಗ ಈ ಕುರಿತು ದೀರ್ಘವಾಗಿ ಚರ್ಚಿಸಿದ ಆಡಳಿತಾಧಿಕಾರಿ ಹಾಗೂ ಕಾರ್ಯನಿರ್ವ ಹಣಾಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಸುಧಾರಣಾ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಮೂಡಿಸಿದರು.

ಕೃಷಿ, ತೋಟಗಾರಿಕೆ, ಶಿಕ್ಷಣ, ಜಿ.ಪಂ ಇಂಜಿನಿಯರಿಂಗ್ ವಿಭಾಗ, ನೀರಾವರಿ, ಅರಣ್ಯ, ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ತಮ್ಮ ಇಲಾಖೆಯ ಮಾಹಿತಿ ನೀಡಿದರು. ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ತಾಪಂ ಇಓ ಪಿ. ವೈ ಸಾವಂತ್ ವಂದಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button