ಕುಮಟಾ: ಕುಮಟಾ ತಾಲೂಕಾಡಳಿತ ಮತ್ತು ಪುರಸಭೆಯ ಸಾರ್ವಜನಿಕ ಪ್ರಕಟಣೆ, ಪಟ್ಟಣದ ನಾಗರೀಕ ಬಂಧುಗಳೇ, ಕರೋನಾ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಔಷದಿ ಅಂಗಡಿ ಹೊರತುಪಡಿಸಿ ಬೆಳಿಗ್ಗೆ 7. ಗಂಟೆಯಿಂದ ಸಂಜೆ 6. ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಅಂಗಡಿಕಾರರರಿಗೆ ಮತ್ತು ಸಾರ್ವಜನಿಕರಿಗೆ ಸಾಮಾಜಿಕ ಅಂತರವನ್ನು ಖಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಯಪಡಿಸಿದೆ. ಪಟ್ಟಣದ ಎಲ್ಲಾ ರೀತಿಯ ಅಂಗಡಿಕಾರರಿಗೆ ಉದ್ದಿಮೆ ಪರವಾನಿಗೆಯನ್ನು ಪುರಸಭೆಯಿಂದ ಪಡೆದುಕೊಳ್ಳುವುದನ್ನು ಕಡ್ಡಾಯಗೋಳಿಸಲಾಗಿರುತ್ತದೆ. ಸಂಜೆ 7. ಗಂಟೆ ನಂತರ ಬೆಳಿಗ್ಗೆ 7. ಗಂಟೆಯವರೆಗೆ ಸಾರ್ವಜನಿಕರು ವೈದ್ಯಕೀಯ ಕಾರಣ ಹೊರತುಪಡಿಸಿ ಪಟ್ಟಣದಲ್ಲಿ ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಾನುವಾರ ಮಾತ್ರ ಔಷಧಿ ಅಂಗಡಿ ಹೊರತುಪಡಿಸಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಇಡುವಂತೆ ಆದೇಶಿಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಆದೇಶವನ್ನು ಉಲ್ಲಂಘಿಸಿದರೆ ಅಥವಾ ಸಹಕರಿಸದೇ ಇದ್ದಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಹಾಗೂ ಇಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಇದಕ್ಕೆ ಆಸ್ಪದ ಕೊಡದೇ ಕೊರೋನಾ ನಿಯಂತ್ರಿಸಲು ಸಹಕರಿಸುವಂತೆ ವಿನಂತಿಸಿದೆ.
Read Next
Important
Wednesday, November 20, 2024, 4:31 PM
ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
Important
Tuesday, November 19, 2024, 10:25 AM
ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
Important
Tuesday, November 19, 2024, 10:21 AM
ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
Important
Sunday, November 17, 2024, 3:55 PM
ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ
Wednesday, November 20, 2024, 4:31 PM
ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
Tuesday, November 19, 2024, 10:25 AM
ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
Tuesday, November 19, 2024, 10:21 AM
ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
Sunday, November 17, 2024, 3:55 PM
ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ
Related Articles
ಕುಕ್ಕರಿನಲ್ಲಿ ನೀರು ಕಾಯಿಸಿ ಗಂಡನ ಮೇಲೆಯೇ ಸುರಿದ ಮಹಿಳೆ: ದೂರಿನಲ್ಲಿ ಏನಿದೆ?
Sunday, November 17, 2024, 10:37 AM
LIC ಏಜೆಂಟನ ಬೈಕಿಗೆ ಡಿಕ್ಕಿ ಪಡಿಸಿದ ನೊಂದಣಿ ಸಂಖ್ಯೆ ನಮೂದು ಇರದ ಆಟೋರಿಕ್ಷಾ: ಬೈಕ್ ಸವಾರ ಮತ್ತು ಪುಟ್ಟ ಮಗುವಿಗೆ ಗಾಯ
Saturday, November 16, 2024, 11:45 AM
ಕಡಲಿಗೆ ಇಳಿದು ಅಪಾಯಕಾರಿ ಕಾರು ಚಾಲನೆ: ಚಾಲಕನಿಗೆ ಬುದ್ದಿ ಕಲಿಸಿದ ಪೊಲೀಸರು
Thursday, November 14, 2024, 11:39 AM
ಉತ್ತರಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಸಮಾರಂಭ: ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ
Thursday, November 14, 2024, 11:35 AM
Check Also
Close - ಬೆಂಗಳೂರಿಗೆ ಹೊಟೇಲ್ ಕೆಲಸಕ್ಕೆ ಹೋದವ ನಾಪತ್ತೆ: ತಂದೆ ದೂರಿನಲ್ಲಿ ಏನಿದೆ ನೋಡಿ?Wednesday, November 13, 2024, 12:31 PM