Important
Trending

3 ದಿನದಿಂದ ಅನ್ನ ಆಹಾರ ಇಲ್ಲದೆ ಬೀಚ್ ನಲ್ಲಿದ್ದ ವ್ಯಕ್ತಿಯ ರಕ್ಷಣೆ: ಅಸ್ವಸ್ಥ ವ್ಯಕ್ತಿ ಜಿಲ್ಲಾಸ್ಪತ್ರೆಗೆ ದಾಖಲು

ಕಾರವಾರ: ನಗರದ ಬೈತಖೋಲ್ ಸಮೀಪದ ಲೇಡಿಸ್ ಬೀಚ್ ನಲ್ಲಿ ಮೂರು ದಿನದಿಂದ ಅನ್ನ ನೀರು ಇಲ್ಲದೇ ಅಸ್ವಸ್ತಗೊಂಡು ಸಿಲುಕಿದ್ದ ಓರ್ವನನ್ನು ಕರಾವಳಿ ಕಾವಲು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಗುರುವಾರ ನಡೆದಿದೆ.

ಒರಿಸ್ಸಾ ಮೂಲದ ನಿರ್ಮಲ್ ಕುಸಮ್ ರಕ್ಷಣೆಗೊಳಗಾದ ಮೀನುಗಾರ ಎನ್ನಲಾಗಿದೆ. ಸಾಮಾನ್ಯವಾಗಿ ಮೀನುಗಾರರು ಹೊರತುಪಡಿಸಿ ಯಾರು ತೆರಳದ ಲೇಡಿಸ್ ಬೀಚ್ ನಲ್ಲಿ ವ್ಯಕ್ತಿಯೋರ್ವ ಯಾವುದೇ ಬೋಟ್ ದೋಣಿ ಇಲ್ಲದೆ ಇರುವುದನ್ನು ಗಮನಿಸಿದ ಮೀನುಗಾರರು ಕರಾವಳಿ ಕಾವಲು ಪಡೆಗೆ ತಿಳಿಸಿದ್ದರು.

ತಕ್ಷಣ ಕಾರವಾರ ಕರಾವಳಿ ಕಾವಲು ಪಡೆಯ ಸಿಪಿಐ ನಿಶ್ಚಲ್ ಕುಮಾರ್ ನೇತ್ರತ್ವದ ತಂಡ ತೆರಳಿ ಆತನನ್ನ ಪತ್ತೆ ಮಾಡಿತ್ತು. ಮೂರು ದಿನದಿಂದ ಆಹಾರ ನೀರು ಇಲ್ಲದೆ ಅಸ್ವಸ್ತನಾಗಿದ್ದ ಆತನನ್ನು ರಕ್ಷಿಸಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒರಿಸ್ಸಾ ಮೂಲದ ನಿರ್ಮಲ್ ಕುಸಮ್ ಲೇಡಿಸ್ ಬೀಚ್ ಗೆ ಹೇಗೆ? ಯಾಕೆ? ತೆರಳಿದ್ದಾನೆ ಎಂಬ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಮೀನುಗಾರಿಕೆ ಕೆಲಸಕ್ಕಾಗಿ ಒರಿಸ್ಸಾದಿಂದ ಕಾರವಾರಕ್ಕೆ ಬಂದಿರುವುದಾಗಿ ಮಾತ್ರ ಮಾಹಿತಿ ನೀಡಿದ್ದು, ಮೂರು ದಿನದ ಹಿಂದೆ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಅಲ್ಲಿಯೇ ಉಳಿದಿರುವ ಸಾಧ್ಯತೆ ಇದೆ ಎನ್ನಾಲಾಗಿದೆ. ಚೇತರಿಕೆ ಬಳಿಕವೇ ಹೆಚ್ಚಿನ ಮಾಹಿತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

ಪ್ರಮುಖ‌ ಸುದ್ದಿಗಳು: ಇದನ್ನೂ ಓದಿ

Back to top button