Focus News
Trending

ಅಂಕೋಲಾ ಪಟ್ಟಣದ ಪ್ರಮುಖ ರಸ್ತೆ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ?

ಅಂಕೋಲಾ:  ನಾಗರಿಕರ ಬಹು ದಿನಗಳ ಬೇಡಿಕೆಯಾದ ಪಟ್ಟಣದ ಶಿರಕುಳಿ ಕ್ರಾಸಿನಿಂದ ಕಣಕಣೇಶ್ವರ ದೇವಸ್ಥಾನದವರೆಗಿನ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿ ಬಹು ವಿಳಂಬವಾಗಿಯಾದರೂ ಆರಂಭವಾದಂತಿದೆ. ಈ ರಸ್ತೆಯಲ್ಲಿ ಸದ್ಯ ,ಭಾರಿ ವಾಹನಗಳ ಓಡಾಟಕ್ಕೆ ನಿರ್ಭಂದ ವಿಧಿಸಿ, ರಸ್ತೆ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. 

ಕಾಮಗಾರಿ ಅಗಸ್ಟ್ 23 ರಿಂದ  ಪ್ರಾರಂಭವಾಗಲಿದ್ದು ವಾಹನಗಳ ಸಂಚಾರಕ್ಕೆ ಬದಲಿ ರಸ್ತೆ ಸೂಚಿಸಿ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಅವರು ಪ್ರಕಟಣೆ ನೀಡಿದ್ದರು..ಭಾರೀ ವಾಹನಗಳಾದ ಬಸ್, ಟೆಂಪೊ, ಹಾಗೂ ಇತರ ನಾಗರಿಕರ  ವಾಹನಗಳು ಗೋಖಲೆ ಕಾಲೇಜು ಬಳಿಯ ಅಂಡರ್ ಪಾಸ್ ಮಾರ್ಗದ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ತಲುಪಲು ಸೂಚನೆ ನೀಡಲಾಗಿದೆ. ಅಂತೆಯೇ ಕಾರವಾರ ಕಡೆ ಹೋಗುವ ವಾಹನಗಳು,  ಕೆ.ಎಲ್. ಇ ಮಾರ್ಗವಾಗಿ ಸುಂದರ ನಾರಾಯಣ ದೇವಸ್ಥಾನದ  ಎದುರಿನಿಂದ ರಾ.ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿ  ಸುರಕ್ಷತಾ ಕ್ರಮಗಳನ್ನು ಪಾಲಿಸಿ  ಸಾಗಲು ಸೂಚಿಸಲಾಗಿದೆ. 

ಬೈಕ್ ಸವಾರರು ರಸ್ತೆ ಕಾಮಗಾರಿ ನಡೆಯುವ ಮೂಲ ಮಾರ್ಗ ಹೊರತು ಪಡಿಸಿ ಇನ್ನಿತರ ಮಾರ್ಗಗಳ ಮೂಲಕ ಸಂಚರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಪುರಸಭೆ, ಪೋಲೀಸ್ ಇತರೆ ಸಂಬಂಧಿಸಿದ ಇಲಾಖೆಗಳು, ರಿಕ್ಷಾ ಮತ್ತಿತರ ವಾಹನಗಳ ಸಂಘದವರಿಗೂ ಗಮನಕ್ಕೆ ತರಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಕಾಮಗಾರಿ  ಪೂರ್ಣಗೊಳ್ಳುವ ವರೆಗೆ ರಸ್ತೆಯ  ಅಕ್ಕಪಕ್ಕದ ನಿವಾಸಿಗಳು,ವ್ಯಾಪಾರಸ್ಥರು ಸೇರಿ  ಎಲ್ಲ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಲಾಗಿದೆ.       

ಕಳೆದ ಎಪ್ರಿಲ್ ತಿಂಗಳಿನಲ್ಲಿಯೇ ಶಾಸಕಿ ರೂಪಾಲಿ ನಾಯ್ಕ, 2 ಕೋಟಿ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ್ದರು. ಅದೇ ದಿನ ನಡೆದ ಕಟೌಟ್ ರಾಜಕಾರಣ,ಇಲಾಖೆಯ ಕೆಲ ತಾಂತ್ರಿಕ ಸಮಸ್ಯೆಗಳು, ಗುತ್ತಿಗೆ ನಿರ್ವಹಣೆ ಸಮಸ್ಯೆ ಇನ್ನಿತರ ಕಾರಣಗಳಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿತ್ತಾದರೂ,ಅಂತು ಇಂತೂ ತೊಡಕೆಲ್ಲವೂ ನಿವಾರಣೆಯಾದಂತಿದ್ದು, ಆದಷ್ಟು ಶೀಘ್ರ ಗುಣಮಟ್ಟದ ಕಾಮಗಾರಿ ಪೂರ್ಣಗೊಂಡು,ಜನಸಂಚಾರಕ್ಕೆ ತೆರೆದುಕೊಳ್ಳುವಂತೆ ಆಗಲಿ ಎನ್ನುವುದು ಬಹುಜನರ ಆಶಯವಾಗಿದೆ                           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button