Big News
Trending

Dudhsagar Falls: ಹಾಲ್ನೊರೆ ಉಕ್ಕಿಸುವ ಸುಂದರಿ ಈ ದೂಧಸಾಗರ ಜಲಪಾತ

ಮೈದುಂಬಿ ಧುಮ್ಮಿಕ್ಕುತ್ತಿದೆ ದೂಧಸಾಗರ
ಬಂಡೆಗಳ ಮಧ್ಯೆ ವಯ್ಯಾರದಿಂದ ಇಳಿಯುತ್ತಿದ್ದಾಳೆ ಶ್ವೇತ ಸುಂದರಿ

ದೂಧಸಾಗರ ಜಲಪಾತದ ( Dudhsagar Falls) ಸೌಂದರ್ಯ ಎಂಥವರನ್ನು ಸೆಳೆಯಬಲ್ಲದು. ಗುಡ್ಡದ ನಡುವಿನಿಂದ ಮೇಲಿನಿಂದ ಬೀಳುವ ನೀರು ಹಾಲಿನ ನೊರೆಯಂತೆ ಕಾಣವುದನ್ನು ನೋಡುವುದು ಒಂದು ಸೊಬಗು.. ಕರ್ನಾಟಕದಲ್ಲಿ ಹುಟ್ಟಿ ಗೋವಾ ಮೂಲಕ ಹರಿದು ಕಾಳಿ ನದಿ ಸೇರುವ ಮಾಂಡೋವಿ ನದಿಗೆ ಈ ದೂಧಸಾಗರ ಜಲಪಾತವಿದ್ದು, ಎರಡು ಗುಡ್ಡದ ನಡುವಿನಿಂದ ಮೇಲಿನಿಂದ ಬೀಳುವ ನೀರು ಹಾಲಿನ ನೊರೆಯಂತೆ ಕಾಣವುದರಿಂದ ಇದನ್ನು ದೂಧಸಾಗರ ಹೆಸರಿನಿಂದ ಕರೆಯಲಾಗುತ್ತದೆ. ಮಳೆಗಾಲದ ಜೂನ್ ನಿಂದ ಅಕ್ಟೋಬರ್ ತನಕ ಮೈದುಂಬಿ ಹರಿಯುತ್ತದೆ. ಸದಾ ಹಸಿರು ತುಂಬಿದ ಪ್ರಕೃತಿಯ ನಡುವಿನ ಈ ಪ್ರದೇಶ ಅಮೇಜಾನ್ ಕಾಡು ನೆನಪಿಸುವಂತಿದ್ದು,ಪರಿಸರಾಸಕ್ತರಿಗೆ ಹೇಳಿ ಮಾಡಿಸಿದ ಸ್ಥಳ.

ಪ್ರತಿ ವರ್ಷ ಮಳೆ ಪ್ರಾರಂಭವಾಗುವ ಜೂನ್ ತಿಂಗಳಿಂದ ಅಕ್ಷೋಬರ್ – ನವೆಂಬರ್ ತಿಂಗಳ ತನಕ ಪ್ರತಿ ದಿನ ಸಾವಿರಾರು ಜನರು ಈ ಜಲಪಾತ ವಿಕ್ಷಣೆಗೆ ಬರುತ್ತಾರೆ. ಈ ವರ್ಷ ಕರೋನಾ ರೋಗದ ಕಾರಣ ಪ್ರವಾಸಿಗರಿಗೆ ದೂಧಸಾಗರ ( Dudhsagar Falls) ಪ್ರವೇಶಕ್ಕೆ ಕಾಲ್ನಡಿಗೆ ಅಥವಾ ರೈಲ್ವೆಯಲ್ಲಿ ಪ್ರಯಾಣದ ಅವಕಾಶ ಇಲ್ಲ. ಸದಾ ಪ್ರವಾಸಿಗರಿಂದ ಬಣಗುಡುತ್ತಿದ್ದ ಈ ಸ್ಥಳ ಈಗ ಕಾಲಿ ಕಾಲಿಯಾಗಿದೆ. ದೂಧಸಾಗರ ಜಲಪಾತದ ಮೇಲೆ ಕುವೇಶಿಯಲ್ಲಿ ಭಾರತದಲ್ಲೆ ಪ್ರಥಮವಾಗಿ ನಿರ್ಮಿಸಲಾದ ಕೆನೋಪಿ ವಾಕ್ ಇದೆ.

ವಯ್ಯಾರದಿಂದ ಇಳಿಯುತ್ತಿದ್ದಾಳೆ ಶ್ವೇತ ಸುಂದರಿ

ಇಲ್ಲಿ ಮೂಲ ಸೌಕರ್ಯ ಮತ್ತು ರಸ್ತೆ ಅಭಿವೃದ್ದಿ ಮಾಡಲು ಅರಣ್ಯ ಇಲಾಖೆ ಅಡ್ಡಿಪಡಿಸಿದ ಕಾರಣ ಸ್ಥಳಿಯರ ಮತ್ತು ಅರಣ್ಯ ಇಲಾಖೆಯ ನಡುವಿನ ವೈಮನಸ್ಸಿನಿಂದಾಗಿ ಪ್ರವಾಸಿಗರಿಗೆ ಲಬ್ಯವಿಲ್ಲವಾಗಿದೆ. ಇಲ್ಲಿಂದ ದೂಧಸಾಗರ ಮೇಲೆ ಸಾಗಲು ದಾರಿ ಕೂಡಾಇದ್ದು, ಪ್ರವಾಸಿಗರು ಮೇಲಿಂದ ಈ ಜಲಪಾತ ವಿಕ್ಷಿಸಲು ಅವಕಾಶ ಇದೆ. ಗೋವಾ ರಾಜ್ಯ ದೂಧಸಾಗರ ಪ್ರವಾಸೋಧ್ಯಮದಲ್ಲಿ ಹೆಚ್ಚಿaನ ಆದಾಯ ಗಳಿಸುತ್ತಿದ್ದರೆ. ಕರ್ನಾಟಕ ರಾಜ್ಯ ಮಾತ್ರ ಇಲ್ಲಿ ನಿರ್ಲಕ್ಷ ಮಾಡುತ್ತಿದೆ. ಪ್ರವಾಸೋಧ್ಯಮದ ವಿಪುಲ ಅವಕಾಶವಿರುವುದನ್ನು ಬಳಸಿಕೊಂಡರೆ ಸಾಕಷ್ಟು ಜನರಿಗೆ ಉದ್ಯೋಗ ಅವಕಾಶ ಲಭಿಸಲಿದೆ.

ದೂಧಸಾಗರ ಜಲಪಾತ 1017 ಅಡಿ ಎತ್ತರದಿಂದ ಧುಮುಕುತ್ತದೆ. ಇದು ಸುಮಾರು 100 ಅಡಿ ಅಗಲವಿದೆ. ಮೂರು ವಿಭಾಗವಾಗಿ ಕೆಳಗೆ ಬೀಳುವ ಈ ನೀರು ನೇರವಾಗಿ ಕೆಳಗಡೆ ನೀರಿನಿಂದ ತುಂಬಿದ ಹೊ ಮೇಲುಗಡೆ ಜೊಯಿಡಾ ತಾಲೂಕು ಕೆಳಗೆ ಗೋವಾ ರಾಜ್ಯದ ಸಾಂಗಮ್ ತಾಲೂಕು ಇದ್ದು, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಗೋವಾದ ಮಹಾವೀರ ವನ್ಯ ಜೀವಿ ಅಭಯಾರಣ್ಯದ ದಟ್ಟ ಕಾಡಿನಲ್ಲಿ ಈ ಸುಂದರ ನೈಸರ್ಗಿಕ ಜಲಾಪಾತವಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button