Big News
Trending

ಜಮಾ ಮಾಡಿದ ಲಕ್ಷಗಟ್ಟಗಲೆ ಹಣ ಎಟಿಎಮ್ ಮಷಿನ್ ನಿಂದ ವಾಪಸ್: ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಯುವಕ

ಭಟ್ಕಳ: ಇಲ್ಲಿನ ಬಂದರ್ ರಸ್ತೆಯಲ್ಲಿನ ಎ.ಟಿ ಎಮ್. ಗೆ ಜಮಾ ಮಾಡಲು ಬಂದ ವ್ಯಕ್ತಿಯೋರ್ವರ ಹಣ ಮಶಿನನ ತಾಂತ್ರಿಕ ಸಮಸ್ಯೆಯಿಂದ ವಾಪಸ್ ಬಂದಿದ್ದನ್ನು ಕಂಡ ಯುವಕ ಪೋಲಿಸ್ ವಶಕ್ಕೆ ನೀಡಿ ಮಾಲೀಕರಿಗೆ ಹಿಂತಿರುಗಿಸಿದ ಘಟನೆ ಮಂಗಳವಾರದoದು ವರದಿಯಾಗಿದೆ.

ಇಲ್ಲಿನ ಖಾಸಗಿ ಬ್ಯಾಂಕ್ ಎ.ಟಿ.ಎಮ್. ಗೆ ನಗರದ ನವಾಯತ್ ಕಾಲೋನಿಯ ನಿವಾಸಿ ಬಿಲಾಲ್ ಅಹ್ಮದ್ ತನ್ವಿರ ಎಂಬಾತನು ಆತನ ತಂದೆಯ ಖಾತೆಗೆ 1,74000 ಜಮಾ ಮಾಡಿ ತೆರಳಿದ್ದಾನೆ. ಆದರೆ ಎ.ಟಿ.ಎಮ್. ನಲ್ಲಿನ ತಾಂತ್ರಿಕ ತೊಡಕಿನಿಂದ ಹಣ ವಾಪಸ್ಸು ಬಂದಿದೆ.

ಇದೇ ವೇಳೆ ಬೆಳಕೆಯ ದಿನಕರ ಮಂಗಳಾ ಗೊಂಡ ಎಂಬಾತನು ತಾನು ತನ್ನ ಎ.ಟಿ.ಎಮ್.ನಿಂದ ಹಣ ವಿತ್ ಡ್ರಾ ಮಾಡಲು ತೆರಳಿದ್ದ ವೇಳೆ ಈ ಹಿಂದೆ ಜಮಾ ಮಾಡಿ ತೆರಳಿದ್ದ ವ್ಯಕ್ತಿಯ ಹಣ ವಾಪಸ್ಸಾಗಿರುವುದು ಕಂಡು ಬಂದಿದೆ. ತಕ್ಷಣಕ್ಕೆ ದಿನಕರ ಗೊಂಡ ಅಲ್ಲಿನ ಎ.ಟಿ.ಎಮ್. ಸೆಕ್ಯುರಿಟಿ ಗಾರ್ಡ್ಗೆ ನೀಡಲು ತೆರಳಿದ್ದು, ಆದರೆ ಅದು ಸಂಬoಧಿಸಿದ ಹಣದ ಮಾಲೀಕರಿಗೆ ತಲುಪುವುದು ಅಸಾಧ್ಯವಾಗಲಿದೆ ಎಂಬ ಹಿನ್ನೆಲೆ ನೇರವಾಗಿ ನಗರ ಪೊಲೀಸ ಠಾಣೆಗೆ ಹಣದ ಜೊತೆಗೆ ತೆರಳಿ ಪೋಲಿಸರ ವಶಕ್ಕೆ ಹಣ ನೀಡಿ ಘಟನೆಯನ್ನು ವಿವರಿಸಿದ್ದಾನೆ.

ತಕ್ಷಣಕ್ಕೆ ಎ.ಟಿ.ಎಮ್. ಬಳಿ ತೆರಳಿ ಅಲ್ಲಿನ ಸಿ.ಸಿ.ಟಿವಿ ದ್ರಶ್ಯಾವಳಿ ಪರಿಶೀಲಿಸಿದ ನಗರ ಠಾಣೆ ಪೋಲಿಸರು ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳನ್ನು ವಿಚಾರಿಸಿದ್ದಾರೆ. ಈ ವೇಳೆ ಹಣ ಜಮಾವಣೆ ಮಾಡಿದ್ದು ತನ್ನ ತಂದೆಗೆ ಜಮಾ ಆಗಿಲ್ಲ ಎಂಬುದನ್ನು ಖಾತರಿ ಪಡಿಸಿದ ಬಿಲಾಲ್ ಅಹ್ಮದ್ ಪುನಃ ಎ.ಟಿ.ಎಮ್.ಗೆ ತೆರಳಿದ್ದ. ಹಾಗೂ ಪಕ್ಕದ ಬ್ಯಾಂಕಗೆ ಹೋಗಿ ವಿಚಾರಿಸಿದ ವೇಳೆ ಆಗ ಅಲ್ಲಿಯೇ ಇದ್ದ ಪೋಲಿಸರು ಬಿಲಾಲ್ ಕಳೆದುಕೊಂಡ ಹಣದ ವಿವರ ಮತ್ತು ಆತ ಎ.ಟಿ.ಎಮ್.ಗೆ ತೆರಳಿರುವ ಸಿ.ಸಿ.ಟಿವಿ ದೃಶ್ಯ ಖಾತರಿಪಡಿಸಿಕೊಂಡು ಹಣದ ಮಾಲೀಕನಿಗೆ ಠಾಣೆಗೆ ಬರುವಂತೆ ತಿಳಿಸಿದ್ದಾರೆ.

ಹಣದ ಮಾಲೀಕ ಬಿಲಾಲ್ ಠಾಣೆಗೆ ಬಂದ ವೇಳೆ ಪೋಲಿಸರು ಹಣ ಹಿಂತಿರುಗಿಸಿದ ವ್ಯಕ್ತಿಯು ತಂದ ಹಣವನ್ನು ಪರಿಶೀಲಿಸಲು ಹೇಳಿದರು. ನಂತರ ತಾನು ಜಮಾ ಮಾಡಲು ಬಂದ ಹಣ ಹೌದೆಂಬುದು ಖಾತರಿ ಮಾಡಿದ ಬಿಲಾಲ್ ಗೆ ನಗರ ಠಾಣೆ ಪಿಎಸ್‌ಐ ಹೆಚ್. ಬಿ. ಕುಡಗುಂಟಿ ಅವರು ಹಣದ ಮಾಲೀಕನಿಗೆ ಒಟ್ಟು ರೂ. 1,74000 ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹಣದ ಮಾಲೀಕ ಬಿಲಾಲ್ ಅಹ್ಮದ್ ಅವರು ಹಣ ಹಿಂತಿರುಗಿಸಿದ ಯುವಕ ದಿನಕರ ಗೊಂಡ ಅವರಿಗೆ ಧನ್ಯವಾದ ತಿಳಿಸಿದರು. ಯುವಕರ ಈ ಮಾನವೀಯತೆಯ ಕೆಲಸಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂಧಿಸಿದರು. ಈ ಸಂದರ್ಭದಲ್ಲಿ ನಗರ ಠಾಣೆ ಎ. ಎಸ್. ಐ. ಗಳಾದ ಆರ್. ಜಿ. ವೈದ್ಯ, ರವಿ ನಾಯ್ಕ, ಗೋಪಾಲ ನಾಯಕ, ದೀಪಾ ನಾಯಕ ಹಾಗೂ ಪೋಲಿಸ್ ಸಿಬ್ಬಂದಿ ಗೌತಮ್ ಆರ್. ತನಿಖೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button