Focus News
Trending
ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದಲ್ಲಿ ಕದಿರು ಹರಣೋತ್ಸವ: ದೇವರಿಗೆ ಮೊದಲ ಕದಿರು ಸಮರ್ಪಣೆ
ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಪ್ಲವ ಸಂವತ್ಸರದ ಕದಿರು ಹರಣೋತ್ಸವ ಶಾಸ್ತ್ರೀಯ, ರೂಢಿಗತ ಪರಂಪರೆಯಂತೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಬೆಳಗಿನ ಜಾವ ಸಾರ್ವಭೌಮ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು. ನೂತನ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿ ಪ್ರಸಾದ ವಿತರಣೆ ನಡೆಯಿತು.
ಉತ್ಸವ ಬರುವ ವೇಳೆ ರೈತರು ತಾವು ಬೆಳೆದ ಫಸಲಿನ ಕದಿರನ್ನು ದೇವರಿಗೆ ಸಮರ್ಪಿಸಿ, ನಂತರ ತಮ್ಮಮನೆಯಲ್ಲಿ ಕದಿರು ಪೂಜೆ ಕೈಗೊಂಡರು. ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು. ಬಳಿಕ ದೇವಾಲಯದ ನಂದಿ ಮಂಟಪದಲ್ಲಿ ನೂತನ ಕದಿರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.