ಖರ್ಚು ಮಾಡಿದ್ದು 25 ರಿಂದ 30 ಸಾವಿರ: ಪರಿಹಾರ ಗುಂಟೆಗೆ ಕೇವಲ 68 ರೂಪಾಯಿ: ರೈತರ ಮಹಿಳೆಯ ಆಕ್ರೋಶ
ಹೊನ್ನಾವರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಕೊಯ್ಲಾದ ಭತ್ತದ ಬೆಳೆ ಸಂಪೂರ್ಣ ಮಳೆ ನೀರಿಗೆ ಸಿಕ್ಕಿ ಹಾನಿಯಾಗಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನದ ಬಳಿಕ ಜಿಲ್ಲೆಯಾದ್ಯಾಂತ ಗುಡುಗಿ ಸಿಡಿಲು ಸಹಿತ ಭಾರಿ ಮಳೆಯಾಗಿತ್ತು. ತಡರಾತ್ರಿವರೆಗೆ ಸುರಿದ ಅಕಾಲಿಕ ಮಳೆ ಮುಂಜಾನೆ ಕೂಡ ಶಿರಸಿ, ಸಿದ್ದಾಪುರ , ಕುಮಟಾ, ಹೊನ್ನಾವರ, ಅಂಕೋಲಾ ಸೇರಿದಂತೆ ಹಲವೆಡೆ ಮಳೆಯಾಗಿದ್ದು ರೈತರು ಜನಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಅದರಲ್ಲಿಯೂ ಕರಾವಳಿಯ ಅಂಕೋಲಾ, ಹೊನ್ನಾವರ, ಕುಮಟಾ ಭಾಗದಲ್ಲಿ ಭತ್ತದ ಬೆಳೆ ಬೆಳೆದು ನಿಂತಿದ್ದು ಬಹುತೇಕರು ಕೋಯ್ಲು ಸಹ ಪ್ರಾರಂಭಿಸಿದ್ದರು. ಆದರೆ ಸುರಿದ ಮಳೆಯಿಂದಾಗಿ ಎಲ್ಲವೂ ನೀರು ಪಾಲಾಗಿದೆ. ಗೋಕರ್ಣದ ಗಂಗೆಕೊಳ್ಳದಲ್ಲಿ ರೈತರೊಬ್ಬರು ಎರಡು ದಿನ ಕೊಯ್ದು ಗದ್ದೆಯಲ್ಲಿ ಬಿಟ್ಟಿದ್ದ ಭತ್ತದ ಪೈರು ಸಂಪೂರ್ಣ ಮಳೆ ನೀರಿನಲ್ಲಿ ಮುಳುಗಿ ತೇಲಲಾರಂಭಿಸಿದೆ. ಇದೀಗ ಮಳೆ ಕಡಿಮೆಯಾದ ಕಾರಣ ನೀರಿನಲ್ಲಿರುವ ಪೈರು ರಕ್ಷಣೆಗೆ ಮುಂದಾಗಿರುವ ರೈತರು ಅವುಗಳನ್ನು ನೀರಿನಿಂದ ಮೇಲೆತ್ತಿ ಒಣಗಿಸಲು ಹರಸಾಹಸ ಪಡುತ್ತಿದ್ದಾರೆ.
ಕೈಗೆ ಬಂದ ಬೆಳೆ ಕೊನೆ ಗಳಿಗೆಯಲ್ಲಿ ನೀರು ಪಾಲಾಗಿ ಲಕ್ಷಾಂತರ ರೂ ಬೆಳೆ ಹಾನಿಯಾಗಿದ್ದು ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಸಂಬoಧ ರೈತ ಮಹಿಳೆ ನೀಲಾ ಕೃಷ್ಣ ಗೌಡ ಮಾತನಾಡಿ , ನಮ್ಮದು ಒಂದು ಎಕರೆ ಜಾಗದಲ್ಲಿ ಬೆಳೆದ ಬೆಳೆ ನೀರಿನಲ್ಲಿ ತೇಲುತ್ತಿದೆ. ನಮ್ಮ ಪರಿಸ್ಥಿತಿ ತುಂಬಾ ಕಷ್ಟವಾಗಿದೆ. ನಾವು ಕಂಗಾಲಾಗಿದೆವೆ. ಅಧಿಕಾರಿಗಳು ಇಲ್ಲಿಗೆ ಬಂದಿದರು ಗುಂಟೆಗೆ 68 ರೂಪಾಯಿ ಪರಿಹಾರ ನೀಡುತ್ತಾರೆ. ಇವರು ನೀಡುವ ಪರಿಹಾರ ದಾಖಲೆ ಪತ್ರಕ್ಕು ಆಗುವುದಿಲ್ಲ. ಒಂದು ಎಕರೆ ಜಾಗದಲ್ಲಿ ಬೆಳೆ ಬೆಳೆಯಲು ಸುಮಾರು 25 ರಿಂದ 30 ಸಾವಿರ ಖರ್ಚುಮಾಡಿದ್ದೇವೆ ಎಂದು ನೋವನ್ನು ಹಂಚಿಕೊoಡರು,
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537