ನೀಲಗೋಡ ಯಕ್ಷೀ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವಸ್ವಾಮಿಯವರಿಗೆ ಒಲಿದ ಕದಂಬ ಚಕ್ರೇಶ್ವರ ಮಯೂರವರ್ಮ ಪ್ರಶಸ್ತಿ
ಕನ್ನಡಿಗರ ಪ್ರಪಥಮ ರಾಜದಾನಿ ಬನವಾಸಿಯಲ್ಲಿ ಕನ್ನಡ ರಾಜೋತ್ಸವದ ಅಂಗವಾಗಿ ಕದಂಬ ಸೈನ್ಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೀಲಗೋಡ ಯ್ಕಕ್ಷೀ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾದೇವ ಸ್ವಾಮಿಯವರಿಗೆ ಕದಂಬ ಚಕ್ರೇಶ್ವರ ಮಯೂರವರ್ಮ ಪ್ರಶಸ್ತಿ ನೀಡಿ ಸನ್ಮನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಅವದೂತ ವಿನಯ್ ಗುರೂಜಿ, ಸಿಗಂದೂರ್ ಧರ್ಮದರ್ಶಿಗಳ ಪುತ್ರರಾದ ರವಿ ಕುಮಾರ್, ಕಡೆ ನಂದಿಹಳ್ಳಿ ಶ್ರೀಗಳಾದ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿಗಳು ಹಾಗೂ ಶ್ರೀಮತಿ ಸುಷ್ಮಾ ರಾಜಗೋಪಾಲ ರೆಡ್ಡಿ ಕದಂಬ ಸೈನ್ಯದ ರಾಜ್ಯ ಅಧ್ಯಕ್ಷರಾದ ಬೇಕ್ರಿ ರಮೇಶ್, ಮಾಜಿ ಶಾಸಕ ಪ್ರಕಾಶ್ ಮುದೋಳ, ಜಿಲ್ಲಾ ಕದಂಬ ಸೈನ್ಯದ ಅಧ್ಯಕ್ಷ ದೀಪಕ ಜಿ ಬಂಗ್ಲೆ ಹಾಗೂ ಜಿಲ್ಲಾ ಸಂಚಾಲಕ ಪ್ರಸನ್ನ ನಾಯ್ಕ್ ಉಪಸ್ಥಿತರಿದ್ದರು..
ಹೊನ್ನಾವರ ತಾಲೂಕಿನ ಬಳಕೂರಿನ ಗ್ರಾಮದ ಸಾಮಾನ್ಯ ಮೀನುಗಾರರ ಕುಟುಂಬದ ಶ್ರೀಮತಿ ಸಣ್ಣಿ ಹಾಗೂ ಗೋವಿಂದ ಅಂಬಿಗ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದ ಮಾದೇವ ಸ್ವಾಮೀಯವರು, ತಮ್ಮ ಭಕ್ತಿ ಹಾಗೂ ಶೃದ್ಧೆಯಿಂದ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಿಯ ಅಪಾರ ಕೃಪೆಗೆ ಪಾತ್ರರಾಗಿದ್ದಾರೆ. ಜಗನ್ಮಾತೆಯ ಅನುಗೃಹ ಹಾಗೂ ತಮ್ಮ ಕಠಿಣ, ಅನುಷ್ಠಾನದಿಂದ ಇಂದು ನೀಲಗೋಡ ಕ್ಷೇತ್ರವು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ನಿತ್ಯವೂ ಸಾವಿರಾರು ಭಕ್ತರು ನೀಲಗೋಡ ಕ್ಷೇತ್ರದಲ್ಲಿ ದೇವಿಯ ದರ್ಶನ ಪಡೆಯುತ್ತಿದ್ದು ಇದಕ್ಕೆ ತಮ್ಮ ಮಾನವೀಯತೆಯ ಹಾಗೂ ಸಹಕಾರ ಗುಣವೇ ಕಾರಣವಾಗಿದೆ. ನಿತ್ಯವೂ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಿದ್ದು ಪ್ರತಿನಿತ್ಯವೂ ಅನ್ನದಾನ ಮಾಡಲಾಗುತ್ತಿದೆ.
ದೇವಸ್ಥಾನದಲ್ಲಿ ಗೋಶಾಲೆಯನ್ನು ಆರಂಭಿಸಿ ಸುಮಾರು 42 ಗೋವುಗಳನ್ನು ಸಾಕಿ ಸಲಹಲಾಗುತ್ತಿದೆ. ದೇವಿ ದರ್ಶನಕ್ಕೆ ಬರುವ ಭಕ್ತರ ಉದ್ಧಾರಕ್ಕೆ ವರ್ಷದುದ್ದಕ್ಕೂ ಧಾರ್ಮಿಕ ಕಾರ್ಯಕ್ರಮಗಳನನು ನಡೆಸುತ್ತಾ ಬಂದಿದ್ದು , ಒಮ್ಮೆ ಸಹಸ್ರ ಚಂಡಿಕಾ ಹವನ , ನಾಲ್ಕು ಬಾರಿ ಶತಚಂಡಿ ಹವನ ಹಾಗೂ ಪ್ರತಿ ಅಮವಾಸ್ಯೆಗೂ ನವಚಂಡಿ ಹವನ ನಡೆಸುತ್ತಾ ಬರಲಾಗಿದೆ. ಬಡವರಿಗೆ ಈ ವರೆಗೂ 24 ಜೋಡಿಗಳಿಗೆ ಉಚಿತ ವಿವಾಹ ಮಾಡಿಸಲಾಗಿದೆ.
ನೀಲಗೋಡು ಕ್ಷೇತ್ರದಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತಿದ್ದು ಯಕ್ಷಗಾನ, ಭಜನೆ, ಹಾಗೂ ಸಂಗೀತ ಕಾರ್ಯಕ್ರಮಗಳಿಗೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಡವರ ಚಿಕಿತ್ಸೆಗೆ ಧನ ಸಹಾಯ ಮಾಡಲಾಗುತ್ತಿದೆ.. ತಮ್ಮ ಭಕ್ತಿ, ಶ್ರದ್ಧೆ ಹಾಗೂ ಕಠಿಣ ಪರಿಶ್ರಮಕ್ಕೆ ಶೃಂಗೇರಿ ಜಗದ್ಗುರು ಚಂಕರಾಚಾರ್ಯ ಶ್ರೀಶ್ರೀಶ್ರೀ ಭಾರತೀ ತೀರ್ಥ ಮಹಾ ಸ್ವಾಮಿಗಳು ಕಲಿಯುಗದ ಏಕಲವ್ಯ ಎಂದು ಬಿರುದು ನೀಡಿ ಆಶೀರ್ವದಿಸಿದ್ದು ಅಭಿಮಾನದ ಸಂಗತಿಯಾಗಿದೆ. ಈ ಎಲ್ಲಾ ಸೇವೆಯನ್ನು ಗುರುತಿಸಿ ಕದಂಬ ಸೇನೆಯು ಕದಂಬ ಚಕ್ರೇಶ್ವರ ಮಯೂರ ವರ್ಮ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ