- ಹೊನ್ನಾವರದ ಪ್ರಸಿದ್ಧ ಪ್ರವಾಸಿ ತಾಣದ ಗ್ರಾಮಸ್ಥರಿಗೆ ಕಾಡುತ್ತಿದೆ ಆತಂಕ
- ಪ್ರತಿದಿನ ಜೀವಭಯದಲ್ಲೇ ಬದುಕಬೇಕಾದ ದುಸ್ಥಿತಿ
- ಸಮಸ್ಯೆ ಬಗೆಹರಿಸಿದ್ದರೆ ಹೋರಾಟಕ್ಕೆ ಸಜ್ಜಾಗಿದ್ದಾರೆ ಸಾರ್ವಜನಿಕರು
ಹೊನ್ನಾವರ: ತಾಲೂಕಿನ ಅಪ್ಸರಕೊಂಡ ಜಿಲ್ಲೆಯ ಉತ್ತಮ ಪ್ರವಾಸಿ ತಾಣಗಳಲ್ಲೊಂದು. ಹೌದು, ಅಪ್ಸರೆ ಎಂಬ ಹೆಸರು ಕೇಳುತ್ತಲೇ ಸೌಂದರ್ಯದ ಅನಾವರಣವಾಗತ್ತೆ. ಸುಂದರತೆಯ ಅನುಭೂತಿ ಸಿಗತ್ತೆ. ಬೆಡಗು ಭಿನ್ನಾಣ, ಅಂದ ಚೆಂದ ಎಲ್ಲಾ ಒಂದೇ ಸಮನೆ ಕಣ್ಮುಂದೆ ಬರುತ್ತೆ! ಇಂತಹ ಚೆಂದದ ಪ್ರವಾಸಿತಾಣಗಳಲ್ಲಿ ಗುರುತಿಸಿಕೊಂಡಿದೆ ಉತ್ತರಕನ್ನಡ ಜಿಲ್ಲೆಯಲ್ಲಿರುವ ಅಪ್ಸರಕೊಂಡ.
ಅಪ್ಸರೆಯರು ಇಲ್ಲಿಗೆ ಸ್ನಾನಕ್ಕೆ ಬರುತ್ತಿದ್ದರಂತೆ!
ಮಳೆಗಾಲದಲ್ಲಿ ರಭಸದಿಂದ ಧುಮುಕುವ ಈ ಝರಿ,, ಮಳೆ ಕಡಿಮೆಯಾದಂತೆ ಕ್ಷೀಣವಾಗುತ್ತಾ ಹೋಗುತ್ತದೆ. ಪ್ರವಾಸಿಗರು ಈ ಜಲಪಾತದ ಬುಡದಲ್ಲಿ ಸಂಗ್ರಹವಾಗುವ ನೀರಿನಲ್ಲಿ ಸ್ನಾನ ಮಾಡಿ ಖುಷಿ ಅನುಭವಿಸುತ್ತಾರೆ. ಅಪ್ಸರೆಯರು ಇಲ್ಲಿ ಸ್ನಾನಕ್ಕೆ ಬರುತ್ತಿದ್ದರು. ಹೀಗಾಗಿ ಈ ತಾಣಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂತು ಎಂಬ ಪ್ರತೀತಿಯೂ ಇದೆ.
ಅಲ್ಲದೆ, ಇಲ್ಲಿನ ಬೀಚ್‍ನ ಸೌಂದರ್ಯ ಸವಿಯಲು ಪ್ರತಿನಿತ್ಯ ಇಲ್ಲಿಗೆ ಅಪಾರ ಸಂಖ್ಯೆಯ ಪ್ರವಾಸಿಗರು, ದೂರದುರುಗಳಿಂದ ಆಮಿಸುತ್ತಾರೆ. ಇಲ್ಲಿನ ಕಡಲತೀರದ ಸೌಂದರ್ಯ ಅನುಪಮವಾಗಿದ್ದು, ಮನಸ್ಸನ್ನು ಪ್ರಶಾಂತಗೊಳಿಸಬಲ್ಲದು. ಅಲ್ಲದೆ, ಅಪ್ಸರಕಂಡ ಮಠ ಕೂಡಾ ಧಾರ್ಮಿಕ ಕ್ಷೇತ್ರವಾಗಿ, ಭಕ್ತರನ್ನು ಸೆಳೆಯುತ್ತಿದೆ.
ಅಪ್ಸರಕೊಂಡ ಮಠಕ್ಕೆ ಮತ್ತು ಬೀಚ್ ಗೆ ಹೋಗುವ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಜನರು ಒಡಾಡುತ್ತಾರೆ. ಅಲ್ಲದೆ ಪ್ರವಾಸಿ ತಾಣವಾಗಿರುವ ಅಪಸ್ಸರಕೊಂಡ ಮಠ ಮತ್ತು ಅಪ್ಸರಕೋಂಡ ಪಾಲ್ಸ್‍ಗೆ ಇದೆ ರಸ್ತೆಯಿಂದ ಹೋಗಬೇಕು. ಅಲ್ಲದೆ, ಗ್ರಾಮಸ್ಥರು ಪಟ್ಟಣಕ್ಕೆ ಹೋಗಬೇಕಾದರೆ ಇದೆ ರಸ್ತೆಯಲ್ಲಿಯೆ ಸಂಚರಿಸಬೇಕು. ವಿದ್ಯಾರ್ಥಿಗಳು ಕೂಡಾ ಶಾಲೆ ಮತ್ತು ಕಾಜೇಜುಗಳಿಗೆ ಇದೆ ತಿರುಗಾಡುತ್ತಾರೆ.
ಪ್ರತಿದಿನ ಜೀವಭಯದಲ್ಲೇ ಬದುಕಬೇಕಾದ ದುಸ್ಥಿತಿ
ಇಲ್ಲಿನ ಗ್ರಾಮಸ್ಥರ ಬಹುತೇಕ ಮನೆಗಳು ಇದೇ ರಸ್ತೆಯ ಕೆಳಗಡೆ ಇದೆ. ಇದರಿಂದ ಗ್ರಾಮದ ಕೆಲವರು ಭಯದಿಂದ ಕಾಲಕಳೆಯುವಂತಾಗಿದೆ. ಕಳೆದ ಎರಡು ತಿಂಗಳ ಹಿಂದೆ ಇಲ್ಲಿನ ಗುಡ್ಡ ಕುಸಿದು ರಸ್ತೆ ಸಂಪರ್ಕ ಬಂದಾಗಿತ್ತು. ಈಗ ಭಾರೀ ಮಳೆಗೆ ಮತ್ತೊಂದು ಕಡೆ ಗುಡ್ಡಕುಸಿದು ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಯಾಗಿದೆ.
ಮನೆಯ ಮೇಲೆ ಬೃಹದಾಕಾರದ ಬಂಡೆ ಬೀಳುವ ಆತಂಕ ನಿರ್ಮಾಣವಾಗಿದೆ. ಕಳೆದ ಬಾರಿ ಗುಡ್ಡಕುಸಿದ ಸಂದರ್ಭಲ್ಲಿ ನೀಡಿದ ಭರವಸೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ಭಾರಿ ಅನಾಹುತವಾಗುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಗ್ರಾಮಸ್ಥರಾದ ಕೃಷ್ಣ ಗೌಡ ಮಾತನಾಡಿ ಪ್ರತಿಬಾರಿ ಗುಡ್ಡ ಕುಸಿಯುತ್ತಿದೆ. ಅಧಿಕಾರಿಗಳು ಬಂದು ನೋಡಿ ಹೋಗುವುದು ಬಿಟ್ಟರೆಯಾವುದೆ ಪ್ರಯೋಜನವಾಗಿಲ್ಲ. ನಮ್ಮೆಲ್ಲರ ಮನೆಗಳು ರಸ್ತೆಯ ಪಕ್ಕದಲ್ಲಿಯೆ ಇದ್ದು, ಗುಡ್ಡ ಕುಸಿದರೆ ನಾವು ಏನು ಮಾಡಬೇಕೆಂದು ಪ್ರಶ್ನಿಸಿದರು.
ಗ್ರಾಮಸ್ಥರಾದ ಮಾದೇವ ಗೌಡ ಮಾತನಾಡಿ ಇಲ್ಲಿ ಗುಡ್ಡ ಕುಸಿಯುತ್ತಿದೆ. ನಮ್ಮ ಮನೆಗಳು ರಸ್ತೆಯ ಪಕ್ಕದಲ್ಲಿ ಕೆಳಬಾಗದಲ್ಲಿದೆ. ಗುಡ್ಡ ಕುಸಿದದ್ದೆ ಆದಲ್ಲಿ ನಮ್ಮ ಮನೆಗಳ ಮೇಲೆ ಬೀಳುವ ಸಾಧ್ಯೆತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕುರಿತ ವಿಡಿಯೋ ನೋಡಲು ಈ ಕೆಳಗಿನ ಫೇಸ್ ಬುಕ್ ಲಿಂಕ್ ಕ್ಲಿಕ್ ಮಾಡಿ
ಗ್ರಾಮಸ್ಥರಾದ ತಿಮ್ಮಪ್ಪ ಗೌಡ ಮಾತನಾಡಿ ಅಪ್ಸರಕೊಂಡ ಗ್ರಾಮವು ಪ್ರವಾಸಿ ತಾಣವಾದಮೇಲೆ ರಾಜ್ಯ ಹಾಗೂ ಹೊರ ರಾಜ್ಯದಿಂದ ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ . ಈ ರಸ್ತೆಯಲ್ಲಿ ಜನಸಂದಣಿ ಇರುತ್ತದೆ. ಇಲ್ಲಿ ಮೂರನಾಲ್ಕು ಬಾರಿ ಗುಡ್ಡ ಕುಸಿದಿದೆ. ಈಗಲೂ ಕುಸಿಯುವ ಹಂತದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿಸ್ಮಯ ಟಿ.ವಿ ಫಲಶೃತಿ: ಹೆದ್ದಾರಿಯಲ್ಲಿ ಹೊಂಡ ಗುಂಡಿ ಮುಚ್ಚುವ ಕಾರ್ಯ ಆರಂಭ
- ಅನಂತ್ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿದ್ದು ನಾನೇ!
- ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಮುಂದುವರಿಯಲಿರುವ ಶೋಧ ಕಾರ್ಯಾಚರಣೆ
- ಆಟೋದಲ್ಲಿ ಪ್ಯಾಲೆಸ್ತೀನ್ ಬಂಬಲಿಸಿ ಧ್ವಜ: ಕೆಲವೇ ಗಂಟೆಯಲ್ಲಿ ಪೊಲೀಸರು ತೆರವುಗೊಳಿದ್ದು ಏಕೆ?
- ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment