Follow Us On

WhatsApp Group
Important
Trending

ಗಣೇಶ ವಿಸರ್ಜನೆ ವೇಳೆ ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕ: ಕರಾವಳಿ ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಭಟ್ಕಳ: ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕನನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ರಕ್ಷಿಸಿದ ಘಟನೆ ಭಟ್ಕಳದ ಬಂದರಿನಲ್ಲಿ ನಡೆದಿದೆ. ಗಣೇಶ ಚತುರ್ಥಿಯ ಎರಡನೇ ದಿನವಾದ ಇಂದು ಸಂಜೆ ಶ್ರೀ ಕುಟುಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮ ವಿಸರ್ಜನೆಯ ಸಂದರ್ಭದಲ್ಲಿ ತಲಗೋಡ ಕಡಲ ತೀರದಲ್ಲಿ ಸಮರ್ಥ ಶ್ರೀಧರ ಖಾರ್ವಿ (14) ಸ್ಥಳೀಯ ಬಾಲಕ, ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದು ಇದ್ದಕ್ಕಿದ್ದಂತೆ ಮುಳುಗಲು ಪ್ರಾರಂಭಿಸಿದ್ದಾನೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಖರ್ಚು ಮಾಡಿದ ಹಣದ ವಿಷಯಕ್ಕೆ ಸಹೋದರರ ಗಲಾಟೆ: ಕೊಲೆಯಲ್ಲಿ ಅಂತ್ಯ

ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳಾದ ಸಚಿನ್ ಖಾರ್ವಿ ಹಾಗೂ ರಾಘವೇಂದ್ರ ನಾಯ್ಕ ಬಾಲಕನ ನೆರವಿಗೆ ದಾವಿಸಿ ಮುಳುಗುತ್ತಿರುವ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ತಾಲೂಕಾ ಆಸ್ಪತ್ರೆಗೆ ರವಾನಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗುತ್ತಿದೆ. ಪ್ರಾಣದ ಹಂಗು ತೊರೆದು ಬಾಲಕನ ರಕ್ಷಣೆ ಮಾಡಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳನ್ನು ಸ್ಥಳಿಯರು ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button