Focus News
Trending
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿ ಸಂವಿಧಾನ ದಿನಾಚರಣೆ
ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿ ದಿನಾಂಕ 26-11-2021ರಂದು ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಲೀನಾ ಗೊನೆಹಳ್ಳಿ ಸಂವಿಧಾನ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಎಂ. ಜಿ. ಹಿರೇಕುಡಿಯವರು ಸಂವಿಧಾನ ಹೇಗೆ, ಯಾವಾಗ ರಚನೆ ಆಯಿತು, ಅದರ ಸಮಿತಿಯ ಸದಸ್ಯರು, ಅಧ್ಯಕ್ಷರು ಯಾರು? ಭಾರತದ ಸಂವಿಧಾನದಲ್ಲಿ ಬರುವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಕುಮಾರಿ ರಶ್ಮಿ ನಾಯ್ಕ ಮತ್ತು ಶ್ರೀಮತಿ ಸ್ಪೂರ್ತಿ ಕಲ್ಮನೆ ಪ್ರಾರ್ಥಿಸಿದರು. ಶ್ರೀ ಕೇಶವ ಹೆಚ್. ಗೌಡರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭಾರತದ ಸಂವಿಧಾನದ ಮಹತ್ವದ ಬಗ್ಗೆ ವಿಡಿಯೋ ದೃಶ್ಯಾವಳಿಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು ಮತ್ತು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಲಾಯಿತು.