Focus News
Trending

Lovely ಬಾಬು ಇನ್ನಿಲ್ಲ: ಅಪ್ಪಟ ಕ್ರೀಡಾ ಅಭಿಮಾನಿ,ರಕ್ತದಾನದ ಸಂದೇಶ ಸಾರುತ್ತಿದ್ದ ಶ್ರಮಜೀವಿ ಅಕಾಲಿಕ ವಿಧಿವಶ.

ಅಂಕೋಲಾ: ಕ್ರಿಕೆಟ್ ನ ಅಪ್ಪಟ ಕ್ರೀಡಾಭಿಮಾನಿಯಾಗಿ ಅಂಕೋಲಾದ ಜೈ ಹಿಂದ್ ಮೈದಾನದಲ್ಲಿ ನಡೆಯುತ್ತಿದ್ದ ಬಹುತೇಕ ಎಲ್ಲ ಪಂದ್ಯಾವಳಿಗಳಲ್ಲಿ, ಸ್ವಚ್ಛತೆ ಮುಂತಾದ ಎಲ್ಲ ಕೆಲಸಗಳಲ್ಲಿ ತನ್ನ ಕೈಲಾದ ಸೇವೆ ಸಹಕಾರ ನೀಡುತ್ತ, ಪಂದ್ಯಾವಳಿಯುದ್ಧಕ್ಕೂ ತನ್ನ ಹಾಸ್ಯಭರಿತ ಡೈಲಾಗ್ ಗಳಿಂದ ಎಲ್ಲರನ್ನು ನಗಿಸುತ್ತ, ತಾನೂ ನಗುತ್ತಿದ್ದ ಬಾಬು ಗೋಪಾಲ ಆಗೇರ(38), ಗುರುವಾರ ಮಧ್ಯಾಹ್ನ ಅಕಾಲಿಕ ನಿಧನ ಹೊಂದಿದ್ದಾನೆ. ಆಟಗಾರರ ಕುರಿತು Lovely Lovely ಎನ್ನುತ್ತ ಹುರಿದುಂಬಿಸಿ, ತಾನೂ ಸಹ Lovely ಬಾಬು ಎಂದೇ ಕರೆಯಿಸಿಕೊಳ್ಳುವಷ್ಟರ ಮಟ್ಟಿಗೆ ಪರಿಚಿತನಾಗಿದ್ದ. ©Copyright reserved by Vismaya tv

ಯುವಕರೆಲ್ಲರೂ ರಕ್ತದಾನ ಮಾಡಬೇಕು ಎಂಬ ಸಂದೇಶವನ್ನು ಆಗಾಗ ಸಾರಿ ಹೇಳುತ್ತ ತನ್ನ ಸಾಮಾಜಿಕ ಕಳಕಳಿ ಪ್ರದರ್ಶಿಸುತ್ತಿದ್ದ. ಅಂಕೋಲಾ ಬಸ್ ನಿಲ್ದಾಣದ ಎದುರಿನ ಬಹುತೇಕ ಹೋಟೇಲ್ ಮತ್ತಿತರ ಅಂಗಡಿಯವರ ಪಾಲಿಗೆ ಚಿಕ್ಕ ಪುಟ್ಟ ಕೆಲಸ ಮಾಡಿಕೊಟ್ಟು ಸಹಕರಿಸುತ್ತಿದ್ದ ಬಾಬು, ಈ ಭಾಗದ ರಿಕ್ಷಾ ಮಾಲಕ- ಚಾಲಕರೂ ಸೇರಿದಂತೆ ಎಲ್ಲರಿಗೂ ಚಿರ  ಪರಿಚಿತನಾಗಿ, ಆತ್ಮೀಯನಾಗಿದ್ದ.  ಮೃತ ಬಾಬು ಅಗೇರ ಕಳೆದ 2-3 ದಿನಗಳಿಂದ ಅನ್ನಾಹಾರ ತ್ಯಜಿಸಿ ಅಸ್ವಸ್ಥಗೊಂಡು, ಮಿಶನರಿ ಕಂಪೌಂಡಗೆ  ಹೊಂದಿಕೊಂಡಿರುವ ತನ್ನ ಮನೆಯಲ್ಲಿಯೇ ಇದ್ದ ಎನ್ನಲಾಗಿದೆ.

ವೈದ್ಯರನ್ನು ಕರೆಯಿಸಿ ತಪಾಸಣೆಗೊಳಪಡಿಸುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಈತನ ಸಾವಿನ ಸುದ್ದಿ ಕೇಳುತ್ತಲೇ,ಕುಟುಂಬವರ್ಗದವರು,ಸಮಾಜ ಬಾಂಧವರು, ಗೆಳೆಯರು, ಪರಿಚಿತರು ಅಂತಿಮ ದರ್ಶನ ಪಡೆದುಕೊಂಡರು. ಗೆಳೆಯರ ಬಳಗದ ಪರವಾಗಿ ಮಾದೇವ ಗೌಡ ಬೆಳಂಬಾರ, ಶ್ರೀಧರ ನಾಯ್ಕ (ಸಿರಿ), ಪಚ್ಚು, ಸಂದೇಶ ನಾಯ್ಕ, ಗೌರೀಶ, ಪ್ರಮೋದ, ಸಂದೀಪ ಭೋವಿ, ಪ್ರಮೋದ ಗುನಗಾ, ಸತೀಶ ನಾಯ್ಕ, ಪ್ರಮೋದ ಗುನಗಾ, ವಿದ್ಯಾಧರ ಪಡಿಯಾರ, ಮಂಜುನಾಥ ವಿ ನಾಯ್ಕ ಮತ್ತಿತರರು ಸಂತಾಪ ಸೂಚಿಸಿದ್ದಾರೆ.                   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button