Follow Us On

WhatsApp Group
Focus News
Trending

ಕಲಾವಿದರು ಕರುನಾಡಿನ ಆಸ್ತಿ: ಉಳ್ಳೇಕರ- ಧರಣಿ ಮಂಡಲ ಮಧ್ಯದೊಳಗೆ ಬೆಂಕಿ-ಬಿರುಗಾಳಿ ಹಸ್ತಪ್ರತಿ ಬಿಡುಗಡೆಗೊಳಿಸಿದ ವಿ.ಪ ಸದಸ್ಯ  

ಅಂಕೋಲಾ: ಶ್ರೀ ಮಹಾಲದೇವಿ ಮಹಾಸತಿ ಅರುಣೋದಯ ತರುಣ ನಾಟ್ಯ ಮಂಡಳಿ ಅವರ್ಸಾ ಇವರ ಆಶ್ರಯದಲ್ಲಿ ನಾಟಕ ಬರಹಗಾರ ಸುಜೀತ್ ನಾಯ್ಕ ಅವರ 11 ನೇ ಕೃತಿ ಧರಣಿ ಮಂಡಲ ಮಧ್ಯದೊಳಗೆ ಬೆಂಕಿ ಬಿರುಗಾಳಿ ಹಸ್ತ ಪ್ರತಿಯ ಲೋಕಾರ್ಪಣೆ ಮತ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಕೃತಿಯ ಹಸ್ತಪ್ರತಿಯನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಬಿಡುಗಡೆಗೊಳಿಸಿ ಮಾತನಾಡಿ ಕನ್ನಡ ನಾಡಿನ  ಕಲೆ -ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರ ಕೊಡುಗೆ  ಅತ್ಯಂತ ಮಹತ್ವಪೂರ್ಣವಾಗಿದ್ದು,  ಕರುನಾಡಿನ ಆಸ್ಥಿಯಾಗಿರುವ ಕಲಾವಿದರಿಗೆ ಸರ್ಕಾರದಿಂದ ವಿಶೇಷ ಸವಲತ್ತುಗಳು ಸಿಗುವಂತಾಗಬೇಕು ಎಂದರು.ಇತ್ತೀಚಿನ ವರ್ಷಗಳಲ್ಲಿ ಸಂದಿಗ್ಧ ಪರಿಸ್ಥಿತಿಗಳಿಂದ ಕಲಾವಿದರು ಸಂಕಷ್ಟದಲ್ಲಿದ್ದಾರೆ ಕಲಾವಿದರು ಎದುರಿಸುತ್ತಿರುವ ತೊಂದರೆಗಳನ್ನು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿ ವಿಶೇಷ ಸವಲತ್ತುಗಳನ್ನು ಒದಗಿಸಲು ಒತ್ತಾಯಿಸುವುದಾಗಿ ಅವರು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮತ್ತು  ಕಲಾವಿದ ಅಲಗೇರಿಯ ಸುರೇಶ ನಾಯಕ  ಮಾತನಾಡಿ ರಂಗಭೂಮಿ ಕಲೆಯನ್ನು ಉಳಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದ್ದು ಸುಜಿತ್ ನಾಯ್ಕ ಅವರ ಕೃತಿಗಳು ಜಿಲ್ಲಾದ್ಯಂತ ಪ್ರದರ್ಶನಗೊಳ್ಳುವ ಮೂಲಕ ಹೆಸರು ಮಾಡಿವೆ ಎಂದರು.

ಅಂಕೋಲಾ ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ ಜಾಂಬಳೇಕರ್, ಪತ್ರಕರ್ತ ರಾಘು ಕಾಕರಮಠ ಮತ್ತಿತರರು ಮಾತನಾಡಿದರು.ಯಕ್ಷಗಾನ ಕಲಾವಿದ ಸಂಜಯ ನಾಯ್ಕ, ಭಾವಿಕೇರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸುಭಾಷ ನಾಯಕ, ವರದಿಗಾರ ದರ್ಶನ ನಾಯ್ಕ, ರಂಗಭೂಮಿ ನಟ ಚೇತನ ಮಾಳ್ಸೇಕರ್, ಶ್ರೀನಿವಾಸ ರಾಮನಾಥಕರ್, ಜಾನಪದ ಕಲಾವಿದ ಮಂಜುನಾಥ ಮುದ್ಗೇಕರ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮತ್ತು ಹಿರಿಯ ರಂಗಭೂಮಿ ಕಲಾವಿದ ದಾಮು ನಾಯ್ಕ ಅವರ್ಸಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಮಹಾಲದೇವಿ ಮಹಾಸತಿ ಸಂಸ್ಥಾನದ ಸಂಚಾಲಕ ನಾಗೇಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕೃತಿಕಾರ ಸುಜಿತ್ ನಾಯ್ಕ ವಂದಿಸಿದರು. ಊರ ನಾಗರಿಕರು, ಕಲಾಭಿಮಾನಿಗಳು ಉಪಸ್ಥಿತರಿದ್ದರು. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button