Follow Us On

WhatsApp Group
Big NewsImportant
Trending

ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಯ್ಯಪ್ಪ ಮಾಲಾಧಾರಿ ಸಾವು

ಭಟ್ಕಳ: ಕೆರೆಯ ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಯ್ಯಪ್ಪ ಮಾಲಾಧಾರಿಯೋರ್ವರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗಡಿ ಭಾಗವಾಗಿರುವ ಬೈಲೂರಿನ ಕಾಸಗೇರಿಯಲ್ಲಿ ನಡೆದಿದೆ. ಮೃತ ಅಯ್ಯಪ್ಪ ಮಾಲಾಧಾರಿಯನ್ನು ಅಭಿಷೇಕ ಗಣಪಯ್ಯ ನಾಯ್ಕ (22) ಎಂದು ಗುರುತಿಸಲಾಗಿದೆ.

ಬಸ್‌ನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಅಜ್ಜಿ: ಏನಾಯ್ತು?

ಈತನು ಕಳೆದ ಒಂದು ವಾರದ ಹಿಂದಷ್ಟೇ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ. ರಾತ್ರಿ ಬೈಲೂರು ಗ್ರಾಮದ ಕಾಸಗೇರಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಉಳಿಯುತ್ತಿದ್ದು, ಹಗಲಿನಲ್ಲಿ ಮನೆಗೆ ಬಂದು ಹೋಗುತ್ತಿದ್ದನು. ಬೈಲೂರು ಗ್ರಾಮದ ಕಾಸಗೇರಿಯಲ್ಲಿ ಲುಮಾ ಮಾನು ಮಾರಾಠಿ ಇವರಿಗೆ ಸಂಬಂಧ ಪಟ್ಟ ಅಡಿಕೆ ತೋಟದ ಮೇಲ್ಘಾದಾಲ್ಲಿರುವ ಕೆರೆ ಹೊಂಡದ ನೀರಿಗೆ ಸ್ನಾನಕ್ಕೆ ಎಂದು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ, ಭಟ್ಕಳ

Back to top button