Focus News
Trending

ಮಂಗಗಳಿಂದ ತೊಂದರೆ: ಕತಗಾಲ್ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಕತಗಾಲ: ಮಂಗಗಳಿಂದ  ಕತಗಾಲ ಭಾಗದ ರಿಕ್ಷಾ ಚಾಲಕರು, ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ  ಆಗುವ ತೊಂದರೆಗಳ ಬಗ್ಗೆ ಕತಗಾಲ ವಲಯ ಅರಣ್ಯಾಧಿಕಾರಿಗಳಿಗೆ ಅವರ ಕಚೇರಿಯಲ್ಲಿ ಗ್ರಾಮ ಪಂಚಾಯತ ಸದಸ್ಯ ಶ್ರೀ ಮಹೇಶ್ ದೇಶಭಂಡಾರಿಯವರ ಮುಂದಾಳತ್ವದಲ್ಲಿ ಮನವಿ ಸಲ್ಲಿಸಲಾಯಿತು.. ಈ  ಸಮಸ್ಯೆಯ ಬಗ್ಗೆ ಮಾತನಾಡಿದ ಅವರು  ” ಮಂಗಗಳ ಕಾಟದಿಂದ ಸಾರ್ವಜನಿಕರಿಗೆ ರೈತರಿಗೆ ತುಂಬಾ ತೊಂದರೆಯಾಗುತಿದ್ದು ರಿಕ್ಷಾ ಪ್ರಯಾಣಿಕರು ಗೂಡಅಂಗಡಿಗಳಿಗೆ ಸಣ್ಣ ಹೋಟೆಲ್ ಗಳಿಗೆ ತುಂಬಾ ತೊಂದರೆ ಕೊಡುತ್ತವೆ, ಹೆಂಗಸರು ಮಕ್ಕಳು ಕೈ ಚೀಲ ಹಿಡಿದುಕೊಂಡು ಹೋದರೆ ಕಸಿದುಕೊಂಡು ಮೇಲೆ ಹಲ್ಲೆ ಮಾಡುತ್ತಿವೆ .

ಗೂಡಂಗಡಿ ಸಣ್ಣಪುಟ್ಟ ಹೋಟೆಲಗಳಿಗೆ ನುಗ್ಗಿ ಸಾಮಾನುಗಳನ್ನು ಹಿಟ್ಟು ತರಕಾರಿ ಎಣ್ಣೆ ಬಾಳೆಗೊನೆಗಳನ್ನು ತಿಂದು ನಾಶ ಮಾಡುವುದು ದಿನನಿತ್ಯದ ದೃಶ್ಯವಾಗಿದೆ, ಯಾಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಗಜಾನನ ಪೈಯವರ ನೇತೃತ್ವದಲ್ಲಿ ಮನವಿ ನೀಡಲಾಗಿತ್ತು, ಪಂಚಾಯತ ಗ್ರಾಮ ಸಭೆಯಲ್ಲೂ ಈ ಕುರಿತು ಮನವಿ ನೀಡಲಾಗಿದೆ, ಅದೇ ರೀತಿ ಮತ್ತೆ ಈಗ ಮನವಿ ನೀಡುತ್ತಿದ್ದೇವೆ ” ಎಂದರು. 

ನಂತರ ಮುಂದುವರಿದು ಮಾತನಾಡಿದ ಅವರು ನೂರಾರು ತೆಂಗಿನ ಮರಗಳಿದ್ದರೂ ಅಡುಗೆಗೆ ಅಂಗಡಿಯಿಂದ ತೆಂಗಿನಕಾಯಿ ತರುವ  ಪರಿಸ್ಥಿತಿ ಬಂದಿದೆ. ಹಂದಿಗಳಂತೂ ಬೆಳೆಯನ್ನು ನಾಶ ಮಾಡಿದ್ದಲ್ಲದೆ ಅಡಿಕೆ, ಬಾಳೆ, ತೆಂಗಿನ ಸಸಿಗಳನ್ನು ಕಿತ್ತು ತಿನ್ನುತ್ತಿವೆ, ನೆರೆಯ ರಾಜ್ಯವಾದ  ಕೇರಳದಲ್ಲಿ ಹಂದಿಗಳನ್ನು ಹೊಡೆಯುವಂತಹ ಅವಕಾಶ ರೈತರಿಗಿದೆ ಕರ್ನಾಟಕದಲ್ಲಿ ಯಾಕಿಲ್ಲ ಕರ್ನಾಟಕದ ಹಂದಿಗಳು ಮಾತ್ರ ಒಳ್ಳೆಯವೇ ಎಂದು ಪ್ರಶ್ನಿಸಿದರು.

ಹತ್ತು ಹದಿನೈದು ವರ್ಷಗಳ ಹಿಂದೆ  ಹಂದಿಗಳ ನಿಯಂತ್ರಣಕ್ಕೆ ಹಾಲಕ್ಕಿ ಸಮಾಜದವರು ದೀಪಾವಳಿ, ಸುಗ್ಗಿ ಹಬ್ಬದಂತಹ ಸಂದರ್ಭದಲ್ಲಿ ವರ್ಷದಲ್ಲಿ ಒಂದೆರಡು ಸಲ ಮಾತ್ರ ತಮ್ಮ ಸಾಂಪ್ರದಾಯಿಕ ಹೊಲ ಕಟ್ಟಿ ಹಂದಿಗಳನ್ನು ಬೇಟೆಯಾಡುತ್ತಿದ್ದರು ಆ ಮೂಲಕ ಕಾಡು ಪ್ರಾಣಿಗಳ ಉಪಟಳ ಸ್ವಲ್ಪ ನಿಯಂತ್ರಣದಲ್ಲಿ ಇರುತ್ತಿತ್ತು. ಆದರೆ ಸರ್ಕಾರದ ಕಾನೂನಿನಿಂದಾಗಿ ಅದೂ ಕೂಡ ಸಾದ್ಯವಾಗುತ್ತಿಲ್ಲ, ದಯವಿಟ್ಟು  ಹೊಲ ಕಟ್ಟುವ ಕಾರ್ಯಕ್ಕೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.

ನಂತರ ಮುಂದುವರಿದು ಕಾಡಂಚಿನ ಮನೆಗಳ ಪ್ರದೇಶದಲ್ಲಿ ವಿಷ ಜಂತುಗಳಾದ ಹಾವುಗಳು ಬರುತ್ತವೆ ಅವಗಳನ್ನು ಹಿಡಿಯುವುದಕ್ಕೆ ಉರಗ ತಜ್ಞರನ್ನು ಕರೆಯಿಸಬೇಕಾಗುತ್ತದೆ ಅವರಿಗೆ ಹಾವಿನ ಉಪಟಳದಿಂದ ಸಂತ್ರಸ್ತರಾದವರೆ ವಾಹನದ ಖರ್ಚನ್ನು ನೀಡಬೇಕಾಗುತ್ತದೆ, ಬಡವರಿಗೆ ಅದು ಹೊರೆಯಾಗುತ್ತದೆ ಆದ್ದರಿಂದ ಉರಗ ತಜ್ಞರಿಗೆ ನೀಡುವ ಹಣವನ್ನು ಇಲಾಖೆಯ ವತಿಯಿಂದ ಕೊಡುವ ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಿದರು.

Back to top button