ಆರ್. ಎನ್. ನಾಯಕ ಅವರ ಕೊಲೆ ಪ್ರಕರಣ: ತೀರ್ಪು ಪ್ರಕಟಿಸಿದ ನ್ಯಾಯಾಲಯ: 9 ಆರೋಪಿಗಳು ದೋಷಿಗಳು ಎಂದ ಕೋರ್ಟ್
ಶಿಕ್ಷೆಯ ಪ್ರಮಾಣ ಏಪ್ರಿಲ್ 4 ರಂದು ಪ್ರಕಟ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಮತ್ತು ರಾಜಕೀಯ ಧುರೀಣ ಅಂಕೋಲಾದ ಆರ್. ಎನ್. ನಾಯಕ ಅವರ ಹತ್ಯೆಗೆ ಸಂಬoಧಿಸಿದoತೆ ಬೆಳಗಾವಿಯ ಕೋಕಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 9 ಜನರನ್ನು ದೋಷಿಗಳೆಂದು ಮಹತ್ವಪೂರ್ಣ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 4 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶ ಸಿ.ಎಂ.ಜೋಶಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ 6 ನೇ ಆರೋಪಿ ಕೇರಳದ ರಬುದ್ದೀನ್ 11 ನೇ ಆರೋಪಿ ಬೆಂಗಳೂರಿನ ಮಹಮ್ಮದ ಶಾಬಂದ್ರಿ ಮತ್ತು 16 ನೇ ಆರೋಪಿ ಗೋಕರ್ಣ ಸಮೀಪದ ಆನಂದ ರಮೇಶ ನಾಯಕ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ©Copyright reserved by Vismaya TV ಆರೋಪಿಗಳಾದ ಉತ್ತರ ಪ್ರದೇಶದ ಜಗದೀಶ ಪಟೇಲ,ಬೆಂಗಳೂರಿನ ಅಭಿ ಭಂಡಗಾರ,ಉಡುಪಿಯ ಗಣೇಶ ಭಜಂತ್ರಿ,ಕೇರಳದ ಕೆ.ಎಂ. ಇಸ್ಮಾಯಿಲ್, ಹಾಸನದ ಮಹೇಶ ಅಚ್ಚಂಗಿ,ಕೇರಳದ ಸಂತೋಷ, ಬನ್ನಂಜೆ ರಾಜಾ, ಬೆಂಗಳೂರಿನ ಜಗದೀಶ ಚಂದ್ರರಾಜ್,ಉತ್ತರ ಪ್ರದೇಶದ ಅಂಕಿತ್ ಕಶ್ಯಪ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರುಗಳಾದ ಕೆ.ಜಿ.ಪುರಾಣಿಕಮಠ ಮತ್ತು ಶಿವಪ್ರಸಾದ ವಕಾಲತ್ತು ನಡೆಸಿದ್ದರು.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.