ಯಲ್ಲಾಪುರ: ತಾಯಿಯಿಂದ ಬೇರ್ಪಟ್ಟ ಅಪರೂಪದ ಕಪ್ಪು ಚಿರತೆ ಮರಿ ಹಾಗೂ ಕಂದಮ್ಮಗಾಗಿ ತಾಯಿ ಪರಸ್ಪರ ಹುಡುಕಾಡುತ್ತಿರುವ ದೃಶ್ಯವೊಂದು ಯಲ್ಲಾಪುರ ಅರಣ್ಯ ವ್ಯಾಪ್ತಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಯಲ್ಲಾಪುರದ ಅರಣ್ಯ ವ್ಯಾಪ್ತಿಯಲ್ಲಿ ಕಪ್ಪು ಚಿರತೆ ಮರಿಯೊಂದು ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರತ್ಯಕ್ಷವಾಗಿದ್ದು, ತಾಯಿಗಾಗಿ ಹುಡುಕಾಟ ನಡೆಸಿರುವುದು ಕಂಡುಬoದಿತ್ತು.
ಇದು ಅರಣ್ಯಾಧಿಕಾರಿಗಳ ತಿಳಿದು ತಾಯಿ ಪತ್ತೆಗೆ ಮುಂದಾದಾಗ ಮತ್ತೆರಡು ಮರಿಗಳೊಂದಿಗೆ ತಾಯಿ ಕೂಡ ಹುಡುಕಾಟದಲ್ಲಿ ತೊಡಗಿದ್ದು ಕಂಡುಬoದಿದೆ. ಬಳಿಕ ಮರಿಯು ತಾಯಿಯೊಂದಿಗೆ ಸೇರಿಕೊಂಡಿದ್ದು ಈ ದೃಶ್ಯವೂ ಕ್ಯಾಮಾರ ಕಣ್ಣಲ್ಲಿ ಸೆರೆಯಾಗಿದೆ. ದೇಶದಲ್ಲೇ ಕಪ್ಪು ಚಿರತೆ ಅಪರೂಪವಾಗಿದ್ದು ಅವನತಿಯ ಅಂಚಿನಲ್ಲಿದೆ. ರಾಜ್ಯದಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕಪ್ಪು ಚಿರತೆಗಳಿದ್ದು ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿರುವುದು ಸಂತತಿ ಹೆಚ್ಚಳವಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.