ಯಲ್ಲಾಪುರ: ಪುರಾತನ ಭಗ್ನ ದೇವಾಲಯದ ಬಳಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿದ ಘಟನೆ ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊನಗದ್ದೆ ಸಮೀಪದ ಗಡುಗದ್ದೆ ಬಳಿ ನಡೆದಿದೆ. ಎರಡು ಶಿವ ಲಿಂಗಗಳು, ವರಗಣಪತಿ ಮೂರ್ತಿ, ಮಣ್ಣಿನಲ್ಲಿ ಅರ್ಧದಷ್ಟು ಹೂತಿರುವ ನಂದಿ ಪ್ರತಿಮೆ, ಭಗ್ನವಾಗಿರುವ ವ್ಯಾಘ್ರ ಪ್ರತಿಮೆ ಇಲ್ಲಿದೆ.
ಇಲ್ಲಿನ ಗಡುಗದ್ದೆ ಬಳಿ ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದಿನ ಶಿವ ದೇವಾಲಯ ಭಗ್ನಗೊಂಡ ಸ್ಥಿತಿಯಲ್ಲಿ ಇದೆ. ಇಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಹೊಂಡ ತೆಗೆದು ಶೋಧ ನಡೆಸಿದ್ದಾರೆ. ಮೂರ್ತಿಗಳ ಹಿಂಭಾಗದಲ್ಲಿ ಹೊಂಡ ತೆಗೆದು ನಿಧಿಗಾಗಿ ಶೋಧ ನಡೆಸಲಾಗಿದ್ದು, ನಂತರ ಮತ್ತೆ ಹೊಂಡ ಮುಚ್ಚಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಬoಧಪಟ್ಟವರು ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.