
ಭಟ್ಕಳ: ದನದ ಕೊಟ್ಟಿಗೆ ಮೇಲೆ ದಾಳಿ ನಡೆಸಿದ ಚಿರತೆ ಹಸುವನ್ನು ತಿಂದು ಹಾಕಿದ ಘಟನೆ ಸಮೀಪದ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನಮದ್ಲು ಗ್ರಾಮದ ಬಳಿ ರಾತ್ರಿ ನಡೆದಿದೆ.
ಚಿರತೆ ಕೊಂದು ಹಾಕಿದ ಹಸು ನಾರಾಯಣ ಸೋಮಯ್ಯ ಗೊಂಡ ಕಾನಮದ್ಲು ಎನ್ನುವವರಿಗೆ ಸೇರಿವೆ. ಕಳೆದ ಸುಮಾರು ದಿನದಿಂದ ಚಿರತೆ ಓಡಾಟದ ಬಗ್ಗೆ ಆತಂಕ ಕೇಳಿ ಬಂದಿದ್ದವು.
ಮತ್ತೆ ಕೆಲವರು ಮನೆ ನಾಲ್ಕು ಐದು ಹಸುವನ್ನು ಮತ್ತು ಸಾಕಿದ ನಾಯಿಯನ್ನು ತಿಂದು ಹಾಕಿದೆ ಎಂಬ ಬಗ್ಗೆ ಸಹ ಮಾಹಿತಿ ಕೇಳಿ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಶ್ರೀಕಾಂತ್ ಪವರ್, ಹಾಗೂ ಅರಣ್ಯ ರಕ್ಷಕ ವಿರೇಶ ಪರಿಶೀಲನೆ ಮಾಡಿದ್ದಾರೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ