Focus News
Trending

ಹಿರೇಗುತ್ತಿ ಹೈಸ್ಕೂಲಿನಲ್ಲಿ ಶಾಲಾ ಸಂಸತ್ತು ರಚನೆ ಚುನಾವಣಾ ಕಾರ್ಯಕ್ರಮ

ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ 2022-23 ನೇ ಸಾಲಿನ ಶಾಲಾ ಸಂಸತ್ತಿನ ಸದಸ್ಯರನ್ನು ನೈಜ ಚುನಾವಣಾ ಮಾದರಿಯಲ್ಲಿ ಆಯ್ಕೆ ಮಾಡಲಾಯಿತು. ಮುಖ್ಯ ಚುನಾವಣಾಧಿಕಾರಿಗಳಾದ, ಮುಖ್ಯ ಶಿಕ್ಷಕರು ರೋಹಿದಾಸ ಎಸ್ ಗಾಂವಕರವರ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ವೇಳಾಪಟ್ಟಿ ಪ್ರಕಟಿಸಲಾಯಿತು.

ವಿದ್ಯಾರ್ಥಿಗಳು ನಾಮಪತ್ರವನ್ನು ಸೂಚಕರ ಸಹಿಯೊಂದಿಗೆ ಚುನಾವಣಾಧಿಕಾರಿಯಾದ ನಾಗರಾಜ ಜಿ ನಾಯಕ ಹಾಗೂ ಜಾನಕಿ ಎಂ ಗೊಂಡರವರಿಗೆ ಸಲ್ಲಿಸಲಾಯಿತು. ನಂತರ ನಾಮಪತ್ರ ಪರಿಶೀಲಿಸಿ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಗಳು ಜರುಗಿದವು. ನೈಜ ಚುನಾವಣೆಯಂತೆ ವಿದ್ಯಾರ್ಥಿಗಳಿಗೆ ಚಿಹ್ನೆಗಳ ಪಟ್ಟಿ ನೀಡಿ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತು ವಿದ್ಯಾರ್ಥಿಗಳಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಚುನಾವಣೆ ನಡೆಸಲಾಯಿತು. ಮತಗಟ್ಟೆ ಅಧಿಕಾರಿ, ಪಿ.ಆರ್.ಓ, ಪಿ.ಆರ್.ಓ.ಡಿ ದರ್ಜೆ ಸಹಾಯಕರು ಆರಕ್ಷಕರು ಎಲ್ಲಾ ಇಲ್ಲಿ ಕಂಡುಬoತು.

ಚಿಹ್ನೆ ಸಹಿತ ಇರುವ ಮುದ್ರಿತ ಮತಪತ್ರ, ಮತದಾರರ ಪಟ್ಟಿ, ವೋಟಿಂಗ್ ಕಂಪಾರ್ಟಮೆAಟ್ ರಬ್ಬರ್ ಮೊಹರು ಅಳಿಸಿಹಾಕಲಾಗದ ಶಾಹಿ, ಚುನಾವಣ ಸಾಮಗ್ರಿ ಪಡೆಯುವಿಕೆ, ಹಿಂತಿರುಗಿಸುವಿಕೆ ಚುನಾವಣಾ ಏಜೆಂಟರ್ ನೇಮಕಾತಿ, ಹಾಜರಾತಿ ಕರ್ತವ್ಯದ ಪ್ರಮಾಣ ಪತ್ರ ಬಳಸಿ ಮತ ಚಲಾವಣೆ ಇವೆಲ್ಲ ಶಾಲೆಯ ಸಂಸತ್ತಿನ ಚುನಾವಣೆಯಲ್ಲಿ ಕಂಡುಬAದಿತು. ನೈಜ ಚುನಾವಣೆಯಂತೆ ಮತ ಪತ್ರಗಳನ್ನು 25ರಂತೆ ಬಂಡಲ್ ಮಾಡಿ ಏಣಿಕೆ ಕಾರ್ಯ ನಡೆಯಿತು.

ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಚುನಾವಣೆ ನಡೆಸಲು ಕಾರಣವಾದ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಎನ್ ರಾಮು ಹಿರೇಗುತ್ತಿ, ಶಿಲ್ಪಾ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಇವರ ಸಹಕಾರದಿಂದ ಇಂತಹ ಮಾದರಿ ಚುನಾವಣೆ ನಡೆಸಲು ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಶಾಲಾ ಗಂಡು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ಎಂ.ಜಿ.ನಾಗಭೂಷಣ ಹೆಣ್ಣು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ಕಾಂಚಿಕಾ ನೀಲಕಂಠ ನಾಯಕ ಆಯ್ಕೆಯಾದರು. ಕೊನೆಯಲ್ಲಿ ಎಲ್ಲ ವರ್ಗದ ಪ್ರತಿನಿಧಿಗಳನ್ನು ಆಯ್ಕೆಮಾಡಲಾಯಿತು. ಹಾಗೂ ಸಾಂಸ್ಕೃತಿಕ, ಕ್ರೀಡಾ ಮಂತ್ರಿ, ಸ್ವಚ್ಚತಾ ಮಂತ್ರಿ, ಆಹಾರ ಮತ್ತು ಆರೋಗ್ಯ ಮಂತ್ರಿ, ಪ್ರವಾಸದ ಮಂತ್ರಿ ಹಣಕಾಸು ಮಂತ್ರಿ, ಪ್ರಾರ್ಥನಾ ಮಂತ್ರಿಯನ್ನು ಆಯ್ಕೆ ಮಾಡುವುದರ ಮೂಲಕ ಮಂತ್ರಿಮoಡಲ ರಚನೆಯಾಯಿತು.

Back to top button