
ಹೊನ್ನಾವರ ತಾಲೂಕಿನ ಪ್ರತಿಷ್ಠಿತ ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಶಾಲೆಗೆ ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಎನ್ನುವ ಗೌರವ ಲಭಿಸಿದೆ. ಕಾರವಾರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೆಂಟ್ರಲ್ ಸ್ಕೂಲ್ ಗೆ ಸ್ವಚ್ಛ ವಿದ್ಯಾಲಯ ಅನ್ನುವ ಪುರಸ್ಕಾರ ನೀಡಲಾಗಿದೆ.
- AITM ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ
- ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ: ಆರು ಮಂದಿ ಬಂಧನ
ಶಾಲೆಯಲ್ಲಿ ಸ್ವಚ್ಛತೆಗೆ ಅಳವಡಿಸಲಾಗಿರುವ ವಿವಿಧ ಕ್ರಮಗಳು ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಯೋಜನೆಗಳನ್ನು ಗಮನಿಸಿ ಈ ಪುರಸ್ಕಾರ ದೊರಕಿದೆ.
ಒಟ್ಟು 92% ಅಂಕಗಳೊಂದಿಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರ ಲಭಿಸಿದೆ. ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಕಾಂತಿ ಭಟ್ ಹಾಗೂ ಸಹ ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಈ ಪ್ರಶಸ್ತಿಯನ್ನು ಪಡೆದುಕೊಂಡರು.ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಿಯಾಂಗ ಎಂ. , ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ , ಮಾನ್ಯ ಉಪನಿರ್ದೇಶಕ ಈಶ್ವರ್ ನಾಯ್ಕ್ ,ಇನ್ನಿತರರು ಹಾಜರಿದ್ದರು.ಸೆಂಟ್ರಲ್ ಸ್ಕೂಲ್ ನ ಈ ಸಾಧನೆಗೆ ಆಡಳಿತ ಮಂಡಳಿ , ಶಿಕ್ಷಕರು , ಪಾಲಕರು ಶುಭಾಶಯವನ್ನು ಕೋರಿದ್ದಾರೆ.
ವಿಸ್ಮಯ ನ್ಯೂಸ್ ಹೊನ್ನಾವರ