ಅಂಕೋಲಾ: ಜಿಲ್ಲಾ ಮಟ್ಟದ ಪ್ರಮುಖ ಇಲಾಖೆ ಅಧಿಕಾರಿಗಳು ಸಂಚರಿಸುವ ವಾಹನದ ಇನ್ಸುರೆನ್ಸ್ ತುಂಬದೇ ಹಲವು ವರ್ಷಗಳೇ ಕಳೆದಿದೆಯಂತೆ?. ಆದರೂ ಅಧಿಕಾರಿಗಳು ಜಿಲ್ಲಾ ಕೇಂದ್ರ ಹಾಗೂ ಇತರೆಡೆ ಬಿಂದಾಸಾಗಿ ಓಡಾಡಿಕೊಂಡಿದ್ದಾರoತೆ. ಹೀಗೊಂದು ಅನುಮಾನ ಕಾಡಲಾರಂಭಿಸಿದ್ದು, ಈ ಕುರಿತು ಸಂಬoಧಿತ ಇಲಾಖೆಗಳು ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.
ಅಷ್ಟಕ್ಕೂ ಇದು ಸಾಮಾನ್ಯ ಇಲಾಖೆಯ ವಾಹನವಲ್ಲ ಅನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಸರ್ಕಾರಕ್ಕೂ ಸಾಕಷ್ಟು ಆದಾಯ ತರುವ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಕಾರವಾರದ ಈ ವಾಹನ ಡಿಸ್ಟ್ರಿಕ್ ರಜಿಸ್ಟರ್ ರವರ ಹೆಸರಿನಲ್ಲಿ ಬೊಲೇರೋ ವಾಹನ 2013 ನೇ ಇಸ್ವಿ ಆಗಸ್ಟ 16 ರಂದು ಕಾರವಾರ ಆರ್ ಟಿ ಓ ಆಫೀಸಿನಲ್ಲಿ ನೊಂದಣಿಯಾಗಿದ್ದು, ವಾಹನ ನೊಂದಣಿಗೊoಡು ಈಗಾಗಲೇ ಸುಮಾರು 8 ವರ್ಷ 10 ತಿಂಗಳು ಗತಿಸಿದೆ.
2028 ರ ಆಗಸ್ಟ್ 15 ರ ವರೆಗೆ ಈ ವಾಹನ ದ ಫಿಟ್ನೆಸ್ ಇರಬಹುದಾಗಿದೆ. ಆದರೆ ಆಶ್ಚರ್ಯ ಎಂದರೆ ವಾಹನ ಕೊಳ್ಳುವಾಗ ಮೊದಲ ಇನ್ಸುರೆನ್ಸ ಮಾಡಿಸಿದ್ದು ಬಿಟ್ಟರೆ ಆ ಬಳಿಕ ಒಂದು ವರ್ಷದ ನಂತರದಿoದ ಈ ವರೆಗೂ ಇನ್ಸುರೆನ್ಸ್ ರಿನಿವಲ್ ಮಾಡಿದಂತೆ ಕಂಡು ಬರುತ್ತಿಲ್ಲ ಎಂಬ ಮಾತು ಕೇಳಿ ಬಂದಿದ್ದು 05 ಆಗಸ್ಟ್ 2014ರಲ್ಲಿಯೇ . ಇನ್ಸುರೆನ್ಸ್ ಅವಧಿ ಕೊನೆಗೊಂಡಿದೆ ಎನ್ನಲಾಗಿದೆ.
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
ಒಂದೊಮ್ಮೆ ಆ ಅವಧಿಯ ನಂತರ ಇನ್ಸುರೆನ್ಸ ಹಣ ಪಾವತಿಸದಿದ್ದರೆ ಇದು ಯಾರ ಹೊಣೆ ? ಜನಸಾಮಾನ್ಯರ ವಾಹನಗಳು ನಾನಾ ಕಾರಣಗಳಿಂದ 1-2 ದಿನ ಅವಧಿ ಮೀರಿದ್ದರೂ ದಂಡ ವಿಧಿಸುವ ಇಂದಿನ ದಿನಗಳಲ್ಲಿ , ಸರ್ಕಾರದ ಮಹತ್ವದ ಇಲಾಖೆಗೆ ಅಂತಹ ಕಾನೂನು ಅನ್ವಯಿಸುವುದಿಲ್ಲವೇ ? ಅನ್ವಯಿಸುವುದಿದ್ದರೆ ಕಳ್ಳ ಬೆಕ್ಕಿಗೆ ಗಂಟೆ ಕಟ್ಟುವವರಾರು ? ಈ ಪ್ರಶ್ನೆಗಳಿಗೆ ಸಂಬoಧಿಸಿದವರೇ ಉತ್ತರಿಸಬೇಕಿದೆ.
ಮೇಲ್ನೋಟಕ್ಕೆ ಇದೊಂದೇ ಇಲಾಖೆ ವಾಹನದ ದಾಖಲಾತಿ ಮೇಲೆ ಅನುಮಾನ ಮೂಡಿ ಬಂದಿದ್ದು,ತಮ್ಮದು ಸರ್ಕಾರಿ ವಾಹನ,ಯಾರೂ ತಡೆದು ನಿಲ್ಲಿಸರಾರರು ಇಲ್ಲವೇ ಇನ್ಸೂರೆನ್ಸ್ ಬರಿಸಬೇಕಿದ್ದ ಸರ್ಕಾರವೇ ಅದನ್ನು ತುಂಬದಿದ್ದರೆ ನಾವೇನು ಮಾಡುವುದು ಎನ್ನುವ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಲ್ಲಿ ಇತರೆ ಕೆಲ ಇಲಾಖೆಗಳ ವಾಹನಗಳು ಇದೇ ಹಾದಿ ತುಳಿದರು ಆಶ್ಚರ್ಯ ಪಡುವಂತಿಲ್ಲ ಎಂಬoತಾಗಿದೆ.
ಸoಬoಧಿಸಿದ ಇಲಾಖೆಗಳು ಸೂಕ್ತ ತನಿಖೆ ಯಿಂದ ನಿಖರ ಮಾಹಿತಿಗಳು ತಿಳಿದು ಬರಬೇಕಿದೆ. ಜಿಲ್ಲಾ ನೊಂದಣಾಧಿಕಾರಿ ವಾಹನದ ನಂಬರ ಪ್ಲೇಟ್ ಹಿಂದೊoದು ಸಂಖ್ಯೆ -ಮುಂದೊoದು ಸಂಖ್ಯೆ ಎಂಬoತಾಗಿದ್ದು ಪ್ಲೇಟ್ ಮುರಿತದ ದೋಷವೋ ಅಥವಾ ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸಲು ಬೇಕಂತಲೇ ಹಾಗೆ ಇಡಲಾಗಿದೆ ಎಂಬ ಪ್ರಶ್ನೆ ಕಾಡುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ