ಅರಿಶಿನ ವ್ಯಾಪಾರಕ್ಕೆಂದು ಕರೆಸಿಕೊಂಡು ಹಲ್ಲೆ ; ಹಣ, ಆಭರಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಗಳ ಬಂಧನ
ಯಲ್ಲಾಪುರ: ಅರಿಶಿನ ವ್ಯಾಪಾರಕ್ಕೆಂದು ಕರೆಸಿಕೊಂಡು ನಾಲ್ಕೈದು ಜನರು ಹಲ್ಲೆ ಮಾಡಿ ನಗದು, ಆಭರಣ ದೋಚಿರುವ ಪ್ರಕರಣಕ್ಕೆ ಸಂಬoಧಿಸಿದoತೆ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸುವಲ್ಲಿ ಪೋಲೀಸರು ಯಶ್ವಿಯಾಗಿದ್ದಾರೆ. ಜೂನ್ 14 ರಂದು ಅಂತೋನಿ ದಿವ್ಯಕುಮಾರ ಪ್ರಾನ್ಸಿಸ್ ಫೆರೆರಾ ಹಾಗೂ ಅವರ ಸ್ನೇಹಿತರು ಕಾರಿನಲ್ಲಿ ಹೋಗುತ್ತಿರುವಾಗ ಆರೋಪಿತರು ಅರಿಶಿಣ ವ್ಯಾಪಾರಕ್ಕೆಂದು ಕರೆಸಿಕೊಂಡು ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಅವರಲ್ಲಿದ್ದ ಹಣ, ಆಭರಣ ಹಾಗೂ ಮೊಬೈಲ್ ಸೇರಿ ಒಟ್ಟು 14.30 ಲಕ್ಷ ರೂ ಮೌಲ್ಯದ ಸ್ವತ್ತನ್ನು ದರೋಡೆ ಮಾಡಿದ್ದರು.
ಮಾರಿಕಾಂಬಾದೇವಿಗೆ ಹಾಕಿದ್ದ ಚಿನ್ನದಸರ ಕಳ್ಳತನ: ಆರೋಪಿಯನ್ನು ಬಂಧಿಸಿದ ಪೊಲೀಸರು
ಬೆಳಕಿಯ ಮೊತೇಶ ಸಂತಾನ ಮಸಣ್ಯಾ ಸಿದ್ಧಿ ಚಿಕ್ಜಬಿಳ್ಕಿ, ಹುಲಿಯಾ ಲಕ್ಷ್ಮಣ ಸಿದ್ದಿ, ಪ್ರಕಾಶ ಕೃಷ್ಣ ಸಿದ್ಧಿ, ಪಿಲೀಪ ಕೃಷ್ಣ ಸಿದ್ಧಿ ಬಂಧಿತ ಆರೋಪಿಗಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂದಿಸಿದ್ದು, ಬೈಕ್ ಹಾಗೂ ದರೋಡೆ ಮಾಡಿದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ