ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಕಡತೋಕಾದ ಎಚ್.ಎಸ್.ವಿಶಾಲ್
ಕುಮಟಾ ತಾಲೂಕಿಗೆ ಪ್ರಥಮ, ಜಿಲ್ಲೆಗೆ 5ನೇ Rank
ಕುಮಟಾ : ಕಳೆದ ದ್ವಿತೀಯ ಪಿ.ಯೂ.ಸಿ.ಪರೀಕ್ಷೆಯಲ್ಲಿ ಇಲ್ಲಿನ ಸರಸ್ವತಿ ಪಿ.ಯೂ.ಕಾಲೇಜ್ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎಚ್.ಎಸ್.ವಿಶಾಲ್ ಶೇಕಡಾ 97.5 (585/600) ಅಂಕ ಗಳಿಸಿ ಕುಮಟಾ ತಾಲೂಕಿಗೆ ಪ್ರಥಮ ಸ್ಥಾನ ಗಳಸಿದ್ದಲ್ಲದೇ ಜಿಲ್ಲೆಗೆ 5 ನೇ Rank ಗಳಸಿ ಸಾಧನೆಗೈದಿದ್ದಾನೆ.
ಕಡತೋಕಾದ ಸವಿತಾ ಹೆಗಡೆ ಮತ್ತು ಸೂರ್ಯನಾರಾಯಣ ಹೆಗಡೆ ದಂಪತಿಯ ಪುತ್ರ ನಾಗಿರುವ ಈ ಅಪ್ಪಟ ಗ್ರಾಮೀಣ ಪ್ರತಿಭೆ ಕಡತೋಕಾದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ದಲ್ಲಿ ಶಿಕ್ಷಣ ಪಡೆದು ಪ್ರೌಢ ಶಿಕ್ಷಣವನ್ನು ಕುಮಟಾದ ಕೊಂಕಣ ಎಜ್ಯುಕೇಶನ್ ಸೊಸೈಟಿ ಯ ಸರಸ್ವತಿ ವಿದ್ಯಾ ಕೇಂದ್ರ ದಲ್ಲಿ ಪೂರೈಸಿರುತ್ತಾನೆ. ಎಸ್.ಎಸ್.ಎಲ್.ಸಿ.ಯಲ್ಲಿಯೂ ಶೇ.97.6 ಅಂಕ ಗಳಸಿದ್ದಲ್ಲದೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿ, ಕಾಲೇಜಿನಲ್ಲಿ ಜನರಲ್ ಸೆಕ್ರೆಟರಿ ಯಾಗಿಯೂ ಕಾರ್ಯನಿರ್ವಹಿಸಿದ ವಿದ್ಯಾರ್ಥಿಯಾಗಿರುತ್ತಾನೆ.
ಕುಲದೇವರಾದ ಶ್ರೀ ಸ್ವಯಂಭೇಶ್ವರ ಕೃಪೆ ಹಾಗೂ ಪ.ಪೂ.ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಉಪನ್ಯಾಸಕ ವೃಂದದ ಮಾರ್ಗದರ್ಶನ,ಪಾಲಕರ-ಸ್ನೇಹಿತರ ಪ್ರೋತ್ಸಾಹವನ್ನು ಸದಾ ಸ್ಮರಿಸುವ ವಿಶಾಲ್ , ಯಾವುದೇ ಪ್ರತ್ಯೇಕ ಟ್ಯೂಶನ್ ಕ್ಲಾಸ್ ಗೆ ಹೋಗದೇ ಕಲಿಸಿದ ಅಂದಿನ ದಿನದ ಅಭ್ಯಾಸವನ್ನು ತಾನು ಅಂದೇ ಮಾಡುವ ರೂಢೀ ಇಟ್ಟುಕೊಂಡಿದ್ದಾಗಿಯೂ, ಮುಂದೆ ಸಿ.ಎ. ಅಧ್ಯಯನದ ಗುರಿ ಹೊಂದಿದ್ದು ಈಗಾಗಲೇ ಮಂಗಳೂರಿನ ಪ್ರತಿಷ್ಠಿತ (MAPS) ಕಾಲೇಜ್ ಪ್ರವೇಶ ಪಡೆದು ಕಳೆದೆರಡು ತಿಂಗಳಿನಿಂದ ಸಿ.ಎ.ಫೌಂಡೇಶನ್ online ಕ್ಲಾಸ್ ಪಡೆಯುತ್ತಿರುವುದಾಗಿಯೂ ತಿಳಿಸಿರುತ್ತಾನೆ.