Focus News
Trending

ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘದ 2021-22 ಸಾಲಿನ ವಾರ್ಷಿಕ ಮಹಾಸಭೆ

ಭಟ್ಕಳ ತಾಲೂಕಿನ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ಇದರ 2021-22 ಸಾಲಿನ ವಾರ್ಷಿಕ ಮಹಾಸಭೆಯು ರವಿವಾರದಂದು ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು. ತಾಲೂಕಿನ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ವಾರ್ಷಿಕ ಮಹಾಸಭೆಯು ರವಿವಾರದಂದು ತಾಲೂಕಿನ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು.

ತಡರಾತ್ರಿ ಎಟಿಎಂ ಒಡೆದು ಹಣದೋಚುವ ಪ್ರಯತ್ನ: ಸದ್ದು ಕೇಳಿ ಸುತ್ತಮುತ್ತಲ ಜನರು ಸ್ಥಳಕ್ಕೆ ಬಂದಾಗ ಕಳ್ಳರು ಪರಾರಿ

ವಾರ್ಷಿಕ ವರದಿಯನ್ನು ಅಧ್ಯಕ್ಷರಾದ ಶ್ರೀಧರ ಮಂಜು ಶೆಟ್ಟಿ ಇವರು ಮಾತನಾಡಿ ಸಂಘವು ಕಳೆದ ವರ್ಷದಲ್ಲಿ 2372 ಸದಸ್ಯರನ್ನು ಹೊಂದಿದ್ದು ಶೇರು ಬಂಡವಾಳ ರೂ 84.63 ಲಕ್ಷಕ್ಕೆ ಏರಿರುತ್ತದೆ. ಆಕರ್ಷಕ ಬಡ್ಡಿದರದಲ್ಲಿ ಸಂಘವು ಠೇವುಗಳನ್ನು ಸ್ವೀಕರಿಸುತ್ತಿದ್ದು ವರ್ಷದ ಅಂತ್ಯಕ್ಕೆ ಠೇವು ಸಂಗ್ರಹಣೆ ರೂ 2454.03 ಲಕ್ಷದಷ್ಟಾಗಿದೆ. ದುಡಿಯುವ ಬಂಡವಾಳ ರೂ 2917.56 ಲಕ್ಷದಷ್ಟಾಗಿದ್ದು, ವರದಿ ವರ್ಷದ ಕೊನೆಗೆ ಸಂಘವು ನೀಡಿರುವ ಎಲ್ಲಾ ವಿಧವಾದ ಸಾಲಗಳ ಮೊತ್ತ ರೂ 2066.62 ಲಕ್ಷದಷ್ಟಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಸಂಘವು ವರ್ಷದ ಕೊನೆಗೆ 98.90% ರಷ್ಟು ವಸೂಲಾತಿ ಮಾಡಿರುತ್ತದೆ. ವರ್ಷದ ಕೊನೆಗೆ ರೂ 95.26 ಲಕ್ಷ ನಿವ್ವಳ ಲಾಭ ಗಳಿಸಿರುವ ಸಂಘವು ತನ್ನೆಲ್ಲಾ ಶೇರುದಾರ ಸದಸ್ಯರಿಗೆ ವರದಿಯ ವರ್ಷಕ್ಕೆ 10% ರಷ್ಟು ಲಾಭಾಂಶವನ್ನು ಘೋಷಿಸಲಾಗಿದೆ ಎಂದು ಹೇಳಿದರು.

ಸಭೆಯ ಕೊನೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನಾರಾಯಣ ಮಂಜುನಾಥ ಶೆಟ್ಟಿ, ನಿರ್ದೇಶಕರುಗಳಾದ ಶ್ರೀ ಗಣಪತಿ ವಿಠ್ಠಲ ಶೆಟ್ಟಿ, ಶ್ರೀ ರಾಧಾಕೃಷ್ಣ ಕುಪ್ಪಯ್ಯ ಶೆಟ್ಟಿ, ಶ್ರೀ ಶ್ರೀಧರ ತಿಮ್ಮಪ್ಪ ಶೆಟ್ಟಿ, ಶ್ರೀ ಕೃಷ್ಣಮೂರ್ತಿ ಶೇಷಗಿರಿ ಶೆಟ್ಟಿ, ಶ್ರೀ ಉದಯ ನಾಗೇಶ ಶೆಟ್ಟಿ, ಶ್ರೀ ಲಕ್ಷö್ಮಣ ಮಂಜಯ್ಯ ಶೆಟ್ಟಿ ಶ್ರೀಮತಿ ಉಷಾ ಉದಯ ಶೆಟ್ಟಿ ಹಾಗೂ ಶ್ರೀಮತಿ ಗೀತಾ ಶ್ರೀಧರ ಶೆಟ್ಟಿ ಹಾಗೂ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಭಟ್ಕಳ

land for sale

Back to top button