Follow Us On

WhatsApp Group
Important
Trending

ಇನ್ನೂ ನಿಲ್ಲದ ಮಂಗನಕಾಯಿಲೆ ಆತಂಕ: 100ಕ್ಕೆ ತಲುಪಿದ ಕೇಸ್

ಸಿದ್ದಾಪುರ: ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 11 ವರ್ಷದ ಬಾಲಕನಲ್ಲಿ ಕೆಎಫ್‌ಡಿ ಕಾಯಿಲೆ ದೃಢಪಟ್ಟಿದ್ದು, ಇಂದಿನವರೆಗೆ ಸಿದ್ದಾಪುರ ತಾಲೂಕಿನಲ್ಲಿ 100 ಜನರಲ್ಲಿ ಕೆಎಫ್‌ಡಿ ಕಾಯಿಲೆ ಕಾಣಿಸಿಕೊಂಡಂತಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಂಡ 100 ಜನರ ಪೈಕಿ 8 ಜನ ಮೃತಪಟ್ಟಿದ್ದಾರೆ. ಇಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು 88 ಜನರು ಚಿಕಿತ್ಸೆ ಪಡೆದು ಮನೆಯಲ್ಲಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button