Important

ಮಾಜಿ ಪ್ರಿಯಕರನಿಂದ ಹಾಲಿ ಪ್ರಿಯಕರನಿಗೆ ಚಾಕು ಇರಿತ: ಯಾಕೆ, ಏನಾಗಿತ್ತು ನೋಡಿ?

ಕುಮಟಾ: ಈ ಹಿಂದೆ ಪ್ರೀತಿಸುತ್ತಿದ್ದ ಹುಡುಗಿಯು ತನ್ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಲು ಇಚ್ಚಿಸಿದ ಹಿನ್ನೆಲೆಯಲ್ಲಿ ಹಾಲಿ ಪ್ರಿಯಕರನಿಗೆ , ಮಾಜಿ ಪ್ರಿಯಕರನು ಚಾಕುವಿನಿಂದ ಇರಿದ ಘಟನೆ ಕುಮಟಾದ ಮಣಕಿ ಮೈದಾನದ ಸಮೀಪ ನಡೆದಿದೆ. ಕುಮಟಾ ತಾಲೂಕಿನ ಹೆಗಡೆ ಗ್ರಾಮದ ರಾಜೇಶ ಅಂಬಿಗ ಎಂಬಾತನೆ ಹಲ್ಲೆ ಮಾಡಿದ ಆರೋಪಿ. ಕುಮಟಾ ತಾಲೂಕಿನ ದುಂಡಕುಳಿಯ ಸಂತೋಷ ಅಂಬಿಗ ಹಲ್ಲೆಗೊಳಗಾಗದ ವ್ಯಕ್ತಿ.

ಹಲ್ಲೆ ನಡೆಸಿದ ಆರೋಪಿ ರಾಜೇಶ ಅಂಬಿಗ ಈ ಹಿಂದೆ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಕಾರಣಾಂತರಗಳಿoದ ಇವರಿಬ್ಬರ ಪ್ರೀತಿ ಅರ್ಧಕ್ಕೆ ನಿಂತು, ಆ ಯುವತಿಯು ತನ್ನ ಸಂಬoಧಿಯೇ ಆದ ಸಂತೋಷ ಅಂಬಿಗನನ್ನು ಮದುವೆಯಾಗಲು ಇಚ್ಚಿಸಿದ್ದಳು. ಇದಕ್ಕೆ ಕೋಪಗೊಂಡ ರಾಜೇಶ ಅಂಬಿಗ ಕುಮಟಾದ ಮಣಕಿ ಮೈದಾನದ ಸಮೀಪ ಸಂತೋಷ ಅಂಬಿಗನನ್ನು ಕರೆಯಿಸಿ ಚಾಕುವಿನಿಂದ ಕತ್ತಿಗೆ ಇರಿದಿದ್ದಾನೆ.  ಇದರಿಂದಾಗಿ ಸಂತೋಷ ಅಂಬಿಗ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button