Follow Us On

WhatsApp Group
Important
Trending

ಅಂಕೋಲಾದಲ್ಲಿ 14 ಕರೊನಾ ಸೋಂಕು ದೃಢ?

ಹಲವು ಮುಂಜಾಗ್ರತೆ ನಡುವೆಯೂ ಹೆಚ್ಚುತ್ತಿರುವ ಸೋಂಕು!
ಹಟ್ಟಿಕೇರಿ,ಬೊಬ್ರುವಾಡ,ಬೆಳಂಬರ,ಲಕ್ಷ್ಮೇಶ್ವರ,ಜಮಗೋಡದಲ್ಲಿ ಸೋಂಕು

[sliders_pack id=”2570″]

ಅಂಕೋಲಾ:ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರೆಯುತ್ತಿದ್ದು, ತಾಲೂಕಿನಲ್ಲಿಯು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರ ಒಂದೇ ದಿನ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟಾರೆಯಾಗಿ 14ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನಲ್ಲಿ ದೃಢಗೊಳ್ಳಬೇಕಿದೆ.©Copyright reserved by Vismaya tv
ಹಟ್ಟಿಕೇರಿಯ ಒಂದೇ ಕುಟುಂಬದ 5 ಸದಸ್ಯರಲ್ಲಿ, ಬೊಬ್ರುವಾಡದ ಒಂದೇ ಕುಟುಂಬದ 3 ಮತ್ತು ಇತರೆ1,ತೆಂಕಣಕೇರಿ1, ಬೆಳಂಬರ1, ಜಮಗೋಡ1, ಹಾರವಾಡ1, ಲಕ್ಷ್ಮೇಶ್ವರದಲ್ಲಿ1 ಸೋಂಕಿನ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವರಿಗೆ ಬೆಂಗಳೂರಿನ ಸೋಂಕಿನ ನಂಟು ಕಂಡು ಬಂದರೆ ಇನ್ನು ಕೆಲವರಿಗೆ ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯ ಮೂಲಕ ನಿಖರ ಅಂಕಿ-ಅಂಶಗಳು ಮತ್ತು ಸೋಂಕಿನ ಲಕ್ಷಣಗಳ ಬಗ್ಗೆ ತಿಳಿದು ಬರಬೇಕಿದೆ.
ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ಹಲವು ಮುಂಜಾಗ್ರತೆ ಕೈಗೊಳ್ಳುತ್ತಿದ್ದು ಸಾರ್ವಜನಿಕರ ಆರೋಗ್ಯ ಕಾಳಜಿಗೆ ಒತ್ತು ನೀಡಿವೆ. ಆದರೂ ನಾನಾ ಕಾರಣಗಳಿಂದ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಂಕಿನ ಸುದ್ದಿ ಕೇಳಿದರೆ ಕೆಲವರು ಆತಂಕ ಮತ್ತು ಭಯ-ಭೀತಿಗೆ ಒಳಗಾಗುವುದು,ಇನ್ನು ಕೆಲವರು ಇದು ಸಾಮಾನ್ಯ ಸುದ್ದಿ ಎನ್ನುವಂತೆ ನಿರ್ಲಿಪ್ತ ಭಾವನೆ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಲಾಗಿದೆ.
ಕರೊನಾ ಸೋಂಕಿನಿಂದ ಸಾವಿನ ಸಾಧ್ಯತೆ ಹೆಚ್ಚಿಲ್ಲವಾದರೂ, ಇದು ಸಾಂಕ್ರಾಮಿಕ ರೋಗವಾಗಿರುವದರಿಂದ ಜನತೆ ಸ್ವಯಂ ಪ್ರೇರಿತರಾಗಿ ಹಲವು ಮುನ್ನೆಚ್ಚರಿಕೆ ವಹಿಸಿ ರೋಗ ಪ್ರಸರಣ ತಡೆಗೆ ಸಹಕರಿಸಬೇಕಿದೆ.©Copyright reserved by Vismaya tv

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button