Follow Us On

WhatsApp Group
ಮಾಹಿತಿ
Trending

ರತ್ನಾಕರ ಅಂಕೋಲೆಕರ ವಿಧಿವಶ

[sliders_pack id=”1487″]

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಎದುರಿನ ‘ರಾಧಾಕೃಷ್ಣ’ ಕಾಂಪ್ಲೆಕ್ಸ ಮಾಲಕ ಮತ್ತು ನಿವೃತ್ತ ಪೋಲೀಸ್ ಅಧಿಕಾರಿ ರತ್ನಾಕರ ಕೃಷ್ಣ ಅಂಕೋಲೆಕರ ಶುಕ್ರವಾರ ತಡರಾತ್ರಿ ಹೃದಯಘಾತದಿಂದ ನಿಧನರಾದರು.©Copyright reserved by Vismaya tv) ಮಂಗಳವಾರ ಮುಂಜಾನೆ ಕೆ.ಸಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಅಂಕೋಲೆಕರವರಿಗೆ ಎದೆನೋವು ಕಾಣಿಸಿಕೊಂಡಿದ್ದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ನಡೆಸಿ, ಕಾರವಾರದ ಹೃದಯ ಸಂಬಂಧಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಕ್ಕ ಮಟ್ಟಿನ ತುರ್ತು ಚಿಕಿತ್ಸೆ ನೀಡಲಾಗಿತ್ತು. ನಂತರ ಸ್ವಲ್ಪ ಚೇತರಿಸಿಕೊಂಡಂತೆ ಕಂಡರೂ ಶುಕ್ರವಾರ ರಾತ್ರಿ ವೇಳೆ ಮತ್ತೆ ತೀವ್ರ ಹೃದಯ ಬೇನೆ ಕಾಣಿಸಿಕೊಂಡು ಅಲ್ಲಿಯೇ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ. (©Copyright reserved by Vismaya tv )ನಿವೃತ್ತಿ ಜೀವನದ ನಂತರವೂ ತಮ್ಮದೇ ಸ್ವಂತ ಉದ್ದಿಮೆ-ವ್ಯವಹಾರ ನಡೆಸಿ ಸದಾ ಪಾದರಸದಂತೆ ಚುರುಕಾಗಿದ್ದ ಇವರು ಎಲ್ಲಾ ಸಮಾಜದವರೊಡನೆ ಪ್ರೀತಿ ವಿಶ್ವಾಸಗಳಿದ್ದರು.
ಪತ್ನಿ ರಜನಿ ಅಂಕೋಲೆಕರ, ಗಂಡು ಮಕ್ಕಳಾದ ನಿತಿನ, ನಂದನ, ಸಹೋದರ ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗ ತೊರೆದಿರುವ ಅಂಕೋಲೆಕರವರ ಅಂತ್ಯಸಂಸ್ಕಾರದಲ್ಲಿ ಸಮಾಜ ಬಾಂಧವರು, ಇತರರು ಪಾಲ್ಗೊಂಡಿದ್ದರು. ಮಕ್ಕಳು ವಿದೇಶದಲ್ಲಿರುವುದರಿಂದ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎನ್ನಲಾಗಿದೆ.(©Copyright reserved by Vismaya tv )

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button