ಕಾರವಾರ: ಬೀದಿ ನಾಯಿಯೊಂದನ್ನ ನುಂಗಿ ದೇವಸ್ಥಾನವೊಂದರ ಹತ್ತಿರದ ಪೊದೆಯಲ್ಲಿ ಅಡಗಿಕೊಂಡಿದ್ದ 12 ಅಡಿ ಉದ್ದದ ಬೃಹತ್ ಹೆಬ್ಬಾವೊಂದನ್ನು ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟ ಘಟನೆ ಇಲ್ಲಿನ ಚಂದ್ರದೇವಿ ದೇವಸ್ಥಾನದ ಹತ್ತಿರ ಬಡೆದದೆ. ತನ್ನ ಆಹಾರ ಹುಡುಕಿಕೊಂಡು ದೇವಸ್ಥಾನದ ಬಳಿ ಬಂದಿದ್ದ ಬೃಹತ್ ಹೆಬ್ಬಾವೊಂದು ಬಂದಿತ್ತು. ಈ ವೇಳೆ ಅಲ್ಲಿಯೇ ಇದ್ದ ಬೀದಿನಾಯಿಯನ್ನು ಹೆಬ್ಬಾವು ನುಂಗಿದ್ದು, ಇದನ್ನು ನೋಡಿ ಸ್ಥಳೀಯರು ಕಂಗಾಲಾಗಿದ್ದರು.
India Post Recruitment 2022: 98 ಸಾವಿರ ನೇಮಕಾತಿಗೆ ಅರ್ಜಿ ಆಹ್ವಾನ: SSLC & PUC ಆದವರು ಅರ್ಜಿ ಸಲ್ಲಿಸಬಹುದು.
ಈ ದೃಶ್ಯವನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಉರಗತಜ್ಞ ಗೋಪಾಲ ನಾಯ್ಕ ಹಾಗು ಉರಗಸಂರಕ್ಷಕ ನಿತಿನ್ ಕಾರ್ಯಾಚರಣೆಗೆ ಮುಂದಾದದರು. ಸ್ಥಳೀಯರು ಮತ್ತು ಭಕ್ತರ ಒತ್ತಾಯದ ಮೇರೆಗೆ ಕೊನೆಗೆ ಹೆಬ್ಬಾವಿನ ಬಾಯಿಯಿಂದ ಅರ್ಧ ನುಂಗಿದ್ದ ನಾಯಿಯನ್ನು ಬಿಡಿಸಿ, ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಆದರೆ, ಅಷ್ಟೊತ್ತಿಗಾಗೇ ನಾಯಿ ಮೃತಪಟ್ಟಿತ್ತು. ಈ ದೃಶ್ಯವನ್ನು ನೋಡಲು ದೇವಸ್ಥಾನದ ಸಮೀಪ ಅಪಾರ ಜನ ಸೇರಿದ್ದರು. ಹೆಬ್ಬಾವು ಸುಮಾರು 45 ಕೆ.ಜಿ ಇದ್ದು, ನಾಲ್ಕಾರು ಜನರ ಸಹಕಾರದಿಂದ ಚೀಲಕ್ಕೆ ತುಂಬಿ, ಸುರಕ್ಷಿತವಾಗಿ ಕಾಡಿಗೆ ಬಡಿಲಾಯಿತು.
ವಿಸ್ಮಯ ನ್ಯೂಸ್, ಕಾರವಾರ