- ಡಿ.ಕೆ ಶಿವಕುಮಾರ ಸಾರಥ್ಯದಲ್ಲಿ ಪಕ್ಷವನ್ನು ಸದೃಢಗೊಳಿಸಲು ಕಾರ್ಯತಂತ್ರ
- ಕೆ.ಆರ್ ರೆಹಮಾನ್ ಅಧ್ಯಕ್ಷತೆಯಲ್ಲಿ ನೂತನ ಶಿಸ್ತುಪಾಲನಾ ಸಮಿತಿ
ಕಾರವಾರ: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ ಶಿವಕುಮಾರ ಸಾರಥ್ಯದಲ್ಲಿ ಪಕ್ಷದ ಬಲವರ್ಧನೆಗೆ ನಾನಾ ರೀತಿಯ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದಂತೆ ಶಿಸ್ತು ಕಾಪಾಡಿಕೊಂಡು ಹೋಗಲು ಶಿಸ್ತುಪಾಲನಾ ಸಮಿತಿ ರಚಿಸಲಾಗಿದ್ದು, ಸಮಿತಿಯ ವಕ್ತಾರರಾಗಿ ಯುವ ರಾಜಕಾರಣಿ ನಿವೇದಿತ ಆಳ್ವಾ ನೇಮಕಗೊಂಡಿದ್ದಾರೆ.(©Copyright reserved by Vismaya tv) ಅಂತರಾಷ್ಟ್ರೀಯ ಮಟ್ಟದ ವರ್ಚಸ್ವಿ ನಾಯಕಿಯಾಗಿರುವ ಮಾರ್ಗರೇಟ್ ಆಳ್ವಾರವರ ಪುತ್ರನಾಗಿರುವ ನಿವೇದಿತ ಆಳ್ವಾ ಈ ಹಿಂದೆ ಕೆ.ಪಿಸಿಸಿ ಕಾರ್ಯದರ್ಶಿಯಾಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಇನ್ನಿತರ ವಿವಿಧ ಹುದ್ದೆ ನಿಭಾಯಿಸಿದ್ದಾರೆ.ಯುವ ಉತ್ಸಾಹಿ ಮುಂದಾಳುವಾಗಿರುವ ನಿವೇದಿತ ಆಳ್ವಾ, ತಮ್ಮ ಕುಟುಂಬದ ಆಳ್ವಾ ಪೌಂಡೇಶನ್ ಮೂಲಕ ನೂರಾರು ಸಾಮಾಜಿಕ-ಶೆಕ್ಷಣಿಕ ಮತ್ತಿತ್ತರ ವಿಧಾಯಕ ಕಾರ್ಯಕ್ರಮಗಳನ್ನು ಸಂಘಟಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ಸಂಕಷ್ಟ ಕಾಲದಲ್ಲಿ ಹಲವು ಅಶಕ್ತ ಕುಟುಂಬಗಳಿವೆ. ಮಾನವೀಯ ನೆರವು ನೀಡಿ ಗಮನ ಸೆಳೆದ ಇವರು ಪಕ್ಷದ ಎಲ್ಲಾ ಹಿರಿ ಕಿರಿಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಕೆ.ಆರ್ ರೆಹಮಾನ್ ಅಧ್ಯಕ್ಷತೆಯಲ್ಲಿ 12 ಜನರ ಸಮಿತಿಯಲ್ಲಿ, ನಿವೇದಿತ ಆಳ್ವಾರನ್ನು ವಕ್ತಾರರನ್ನಾಗಿ ನೇಮಿಸಿರುವುದಕ್ಕೆ ಪಕ್ಷದ ವಲಯದಲ್ಲಿ ಮತ್ತು ಆಳ್ವಾ ಕುಟುಂಬದ ಹಿತೈಷಿಗಳ ಹರ್ಷಕ್ಕೆ ಕಾರಣವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
[sliders_pack id=”2570″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)