Follow Us On

WhatsApp Group
ಮಾಹಿತಿ
Trending

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ: ತಹಶೀಲ್ದಾರ್ ಗೆ ಮನವಿ

[sliders_pack id=”1487″]

ಅಂಕೋಲಾ: ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ನಿವಾಸ ಮತ್ತು ಗ್ರಂಥಾಲಯದ ಮೇಲೆ ಕಲ್ಲು ತೂರಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ರಾಷ್ಟ್ರ ದ್ರೋಹದ ಖಾಯಿದೆಯಡಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಮಂಗಳವಾರ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.©Copyright reserved by Vismaya tv
ಮನವಿಯಲ್ಲಿ ತಿಳಿಸಿದಂತೆ 8/07/2020ರಂದು ಮಹಾರಾಷ್ಟ್ರದ ಮುಂಬೈ-ದಾದರ್‍ನಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್‍ರವರ ‘ರಾಜಗ್ರಹ’ ನಿವಾಸ ಮತ್ತು ಗ್ರಂಥಾಲಯದ ಮೇಲೆ ಕಲ್ಲು ತೂರಿ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚದಿರುವುದು ಸ್ಥಳೀಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ ಆದ್ದರಿಂದ ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಅವರನ್ನು ರಾಷ್ಟ್ರ ದ್ರೋಹ ಖಾಯಿದೆಯಡಿ ಗಡಿಪಾರು ಮಾಡಬೇಕು ಹಾಗೂ ರಾಜಗೃಹ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿಕೊಡುವಂತೆ ಕೋರಿದ್ದಾರೆ. ಬಿಜೆಪಿ ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿನೋದ ಆಗೇರ ಈ ಕುರಿತು ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉದಯ ವಿ. ಕುಂಬಾರ ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ಪಕ್ಷದ ಪ್ರಮುಖರಾದ ನಾಗೇಂದ್ರ ಸಿ ನಾಯ್ಕ, ವಿನಾಯಕ ಪಡ್ತಿ, ನಾಗೇಶ ಕಿಣಿ, ಎಸ್.ಸಿ ಮೋರ್ಚಾದ ನಿಲೇಶ ಕೇಣಿ, ಮುರಳಿಧರ ಬಂಟ್, ಆನಂದು ಡಿ. ಲಕ್ಷ್ಮೇಶ್ವರ, ವಿನಾಯಕ ಬಂಟ್, ಸಂದೇಶ ಬಂಟ್ ಸಂತೋಷ ವಂದಿಗೆ, ಸಂದೀಪ ವಂದಿಗೆ ಮತ್ತಿತ್ತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

[sliders_pack id=”2570″]

Back to top button