Important
Trending
ಅಕ್ರಮವಾಗಿ 2.60 ಕೋಟಿ ವೆಚ್ಚದ ವಜ್ರವನ್ನು ದುಬೈಗೆ ಸಾಗಿಸುತ್ತಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಟ್ಕಳ ಮೂಲದ ಇಬ್ಬರು ವಶಕ್ಕೆ
ಭಟ್ಕಳ: ಭಾರತದಿಂದ ದುಬೈಗೆ 2.60 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಸಾಗಿಸುತ್ತಿದ್ದ ಭಟ್ಕಳ ಮೂಲದ ಇಬ್ಬರನ್ನು ಕಸ್ಟಮ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಈಶ್ವರನ ಜಾತ್ರೆಗೆ ಬಂದು ಶಿವನ ಪಾದ ಸೇರಿದ| ಮೀನುಗಾರಿಕೆಗೆ ತೆರಳಿದವ ನೀರು ಪಾಲಾದ
ದುಬೈಗೆ ತೆರಳುತ್ತಿದ್ದ ಭಟ್ಕಳ ಮೂಲದ ಉಮ್ಮರ್ ಧಾಮ ಫಕ್ಕೀ ಹಾಗೂ ಮಹಮ್ಮದ್ ಅನ್ನಾಸ್ ಬಂಧನಕ್ಕೊಳಗಾಗಿದ್ದಾರೆ. ಇವರು ಯಾವುದೇ ಅನುಮಾನ ಬಾರದಂತೆ ತಮ್ಮ ಶೂ ಹಾಗೂ ಬ್ಯಾಗ್‌ನ ಕೆಳಗೆ ವಜ್ರಗಳನ್ನು ಬಚ್ಚಿಟ್ಟು ಸಾಗಾಟ ಮಾಡುವ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಕ್ರಮ ವಜ್ರಗಳು ಪತ್ತೆಯಾಗಿವೆ. ಸದ್ಯ ಇಬ್ಬರು ಆರೋಪಿಗಳನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ