ಜೇಷ್ಠಪುರ ಜಗದಾಂಬಾ ದೇವಿಯ 15ನೆ ವಾರ್ಷಿಕ ವರ್ಧಂತಿ ಉತ್ಸವ : ಅದ್ಧೂರಿಯಾಗಿ ನಡೆದ ಧಾರ್ಮಿಕ ಕಾರ್ಯಕ್ರಮ
ಕುಮಟಾ: ತಾಲೂಕಿನ ಬಾಡದ ಶ್ರೀ ಜೇಷ್ಠಪುರ ಜಗದಾಂಬ ದೇವಿಯ ನವಗರ್ಭ ಗುಡಿಯಲ್ಲಿ ನವವಿಗ್ರಹ ಸ್ಥಾಪನೆಯ 15ನೆಯ ವಾರ್ಷಿಕ ವರ್ಧಂತ್ಯೋತ್ಸವ ಧಾರ್ಮಿಕ ವಿಧಿ ವಿಧಾನದಂತೆ ನಡೆದವು. ರವಿವಾರ ಬೆಳಿಗ್ಗೆ ಗಣಪತಿ ಪ್ರಾರ್ಥನೆ, ಸಾಮೂಹಿಕ ಪ್ರಾರ್ಥನೆ, ಸಪ್ತಶತಿ ಪಾರಾಯಣ ಶ್ರೀದೇವಿಗೆ ಕಲ್ಪೋಕ್ತ ಪಂಚಾಮೃತ ಹಾಗೂ ಮಹಾಪೂಜೆ ಪ್ರಸಾದ ವಿತರಣೆ ನೆರವೇರಿತು.
ಈ ಕುರಿತು ಶ್ರೀ ಜೇಷ್ಠಪುರ ಜಗದಾಂಬ ದೇವಿಯ ದೇವಸ್ಥಾನದ ದರ್ಮದರ್ಶಿ ಮಂಡಳಿಯ ಸದಸ್ಯರಾದ ವಿ.ಆರ್. ಶಾನಬಾಗ ಅವರು ಮಾತನಾಡಿ, ಕುಮಟಾ ತಾಲೂಕಿನ ಗುಡೇಅಂಗಡಿ ಮತ್ತು ಬಾಡಾ ಗ್ರಾಮದ ನಡುವೆ ಇರುವಂತಹ ಜೇಷ್ಠಪುರದಲ್ಲಿ ಶಿವ ಮತ್ತು ಶಕ್ತಿ ಎರಡು ದೇವತೆಗಳು ಕೂಡಿರುವಂತಹ ಅಂಶ ಈ ಸ್ಥಳದಲ್ಲಿದೆ. ಪ್ರತಿ ವರ್ಷದಲ್ಲಿ ಪಾಲ್ಗುಣ ಶುದ್ದ ಸಪ್ತಮಿಯ ದಿನದಂದು ವರ್ಧಂತಿ ಉತ್ಸವವನ್ನು ವಿಜ್ರಂಭಣೆಯಿoದ ಮಾಡುತ್ತಾ ಬಂದಿದ್ದೇವೆ.
ನಾಳಿನ ಚಂಡಿಹವನದ ಪ್ರಯುಕ್ತ ಇಂದು ಶಾಂತಿಜಪಾವನ್ನು ವೈದೀಕರ ಮುಖಾಂತರ ನಡೆಯುತ್ತಿದೆ. 27 ಸೋಮವಾರ ಬೆಳಗ್ಗೆ ಗಣಪತಿ ಪೂಜೆ,ಪುಣ್ಯಹ ವಾಚನೆ, ಕುಂಭಾಭಿಷೇಕ, ಗಣಪತಿ ಹವನ, ನವಗ್ರಹ ಶಾಂತಿ, ನವಚಂಡಿ ಹವನ, ಕೂಷ್ಮಾಂಡ ಬಲಿ ದೇವಿಗೆ ಕಲ್ಪೋಕ್ತ ಪೂಜೆ, ಚಂಡಿ ಹವನ ಪೂರ್ಣಾವತಿ, 12:30 ಕ್ಕೆ ಶ್ರೀ ದೇವರಿಗೆ ಮಹಾಮಂಗಳಾರತಿ, ಮಹಾಪ್ರಾರ್ಥನೆ, ಪ್ರಸಾದ ವಿತರಣೆ ನಂತರ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕರೆಂದು ಕೋರಿದರು.
ನಂತರ ಡಾ. ಎ.ಎಸ್.ಹೆಗಡೆಯವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಜೇಷ್ಠಪುರ ಜಗದಾಂಬ ದೇವಿಯ ನವಮೂರ್ತಿ ಪ್ರತಿಷ್ಠಾಪನೆಯ 15ನೇ ವಾರ್ಷಿಕ ವರ್ಧಂತಿ ಉತ್ಸವ ನಡೆಯುತ್ತಿ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರನ್ನು ಆಹ್ವಾನಿಸುತ್ತಿದೇವೆ. ಎಲ್ಲರೂ ಈ ಒಂದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಅನುಗ್ರಹವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ