Focus News
Trending

ಶಿಕ್ಷಣಕ್ಕೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು: ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ಶಿಕ್ಷಣಕ್ಕೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು, ಶಿಕ್ಷಣ ಕೇವಲ ಉದ್ಯೋಗ ಕ್ಕೆ ಸೀಮೀತವಾಗಬಾರದು, ಗ್ರಾಮೀಣ ಬದುಕು ಬದಲಾಯಿಸುವಂತಿರಬೇಕು, ಶಿಕ್ಷಣ ಹೊಂದಿದ ಸಮಾಜದಲ್ಲಿ ಸಮಾನತೆ ಏಕತೆ ಮೂಡಿ, ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುಂತಾಗುತ್ತದೆ. ಹಾಗಾದಾಗ ಈ ಕಾರ್ಯ ಕ್ರಮಕ್ಕೆ ಅರ್ಥ ಬರುತ್ತದೆ. ಎಂದು ಸಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯ ಪಟ್ಟರು.

ಅವರು ಕೋಲಸಿರ್ಸಿ ಪಿಯು ಕಾಲೇಜಿನ ಲ್ಲಿ ನಡೆದ 2023-24ನೇ ಸಾಲಿನ ವಿಧ್ಯಾರ್ಥಿ ಸಂಸತ್ತು, ಮತ್ತು ಕ್ರೀಡಾ ಸಾಂಸ್ಕೃತಿಕ ಹಾಗೂ ವಿವಿಧ ಪಠ್ಯೇತರ ಚಟುವಟಿಕೆ ಗಳ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಪ್ರಶಾಂತ ತಾರೀಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ದಾಪುರ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಕಾಲೇಜು ಆಡಳಿತ ಸಮಿತಿ ಉಪಾಧ್ಯಕ್ಷ ರಾಜೇಶ ನಾರಾಯಣ ನಾಯ್ಕ ಕತ್ತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಸಿ. ಗೌಡರ, ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button