Focus News
Trending

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನುಡಿನಮನ

ಹೊನ್ನಾವರ: ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಸಂಸ್ಕ್ರತ ಪಾಠಶಾಲೆಯಲ್ಲಿ ಇತ್ತೀಚಿಗೆ ನಿಧನರಾದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ನುಡಿನಮನ ಕಾರ್ಯಕ್ರಮ ಶೃದ್ದಾಂಜಲಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಸುಬ್ರಹ್ಮಣ್ಯ ಶಾಸ್ತ್ರಿಯವರ ಅಭಿಮಾನಿಗಳು, ಸುಬ್ರಹ್ಮಣ್ಯ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆಯ ಮೂಲಕ ನಮಿಸಿದರು.

ಈ ಸಂದರ್ಭದಲ್ಲಿ ಸಂಸ್ಕ್ರತ ಪಾಠಶಾಲೆಯ ಪ್ರಾಚಾರ್ಯರಾದ ವಿ.ಜಿ.ಹೆಗಡೆ ಗುಡ್ಗೆ ಮಾತನಾಡಿ ಸುಬ್ರಹ್ಮಣ್ಯ ಶಾಸ್ತ್ರಿಯವರು ನಮ್ಮೊಂದಿಗೆ ಅವರು ದೈಹಿಕವಾಗಿ ದೂರವಾದರು ಅವರ ಪ್ರೀತಿ, ಸರಳತೆ ನಮ್ಮೊಡನೆ ಸದಾ ಇರಲಿದೆ. ಜಿಲ್ಲಾ ಪಂಚಾಯತ ಸದಸ್ಯರಾಗಿ, ಉದ್ಯಮಿಯಾಗಿ ಮಾಡಿದ ಕಾರ್ಯ ಜನಮಾಸನದಲ್ಲಿ ಸದಾ ಕಾಲ ಛಾಪು ಮೂಡಿಸಿದೆ ಎಂದು ಶಾಸ್ತ್ರಿಯವರ ಜೀವನ ಕುರಿತು ರಚಿಸಿದ ಸ್ವರಚಿತ ಕವನ ವಾಚಿಸಿದರು.

ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ನುಡಿನಮನ ಸಲ್ಲಿಸಿ, ಆತ್ಮೀಯ ಗೆಳೆಯನನ್ನು ಕಳೆದುಕೊಂಡಿರುವ ನೋವು ಕಾಡುತ್ತಿದೆ. ಪ್ರಥಮವಾಗಿ ಬಿಜೆಪಿ ಪಕ್ಷದಿಂದ ಶಾಸಕರಾಗುವ ಸಮಯದಲ್ಲಿ ಹಗಲು ರಾತ್ರಿ ದುಡಿದು ಗೆಲ್ಲಿಸಿದ್ದರು. ಚಂದಾವರ, ಸಾಲ್ಕೋಡ್ ಭಾಗದಲ್ಲಿ ಜಿ.ಪಂ. ಅವಧಿಯಲ್ಲಿ ಹಲವು ಕಾರ್ಯಗಳು ನಡೆದಿದ್ದು, ಇಂದಿಗೂ ಅಲ್ಲಿಯ ಜನತೆಯು ಶಾಸ್ತ್ರಿಯವರನ್ನು ಸ್ಮರಿಸುತ್ತಿದ್ದಾರೆ. ಅನಾರೊಗ್ಯಕ್ಕೆ ತುತ್ತಾದಾಗ ಧರ್ಮಪತ್ನಿ ಶ್ರೀಕಲಾ ಶಾಸ್ತ್ರಿಯವರು ಅವರನ್ನು ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸಿದ್ದರು. ಇವರ ನಿಧನದ ನೋವನ್ನು ಕುಟುಂಬದವರಿಗೆ ಸಹಿಸುಕೊಳ್ಳುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಹೊನ್ನಾವರ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಸುರೇಶ ಶೆಟ್ಟಿ, ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯ ಗೋವಿಂದ ಗೌಡ, ಎಸ್.ಜಿ.ಭಟ್, ಎಂ.ಎಸ್.ಹೆಗಡೆ ಕಣ್ಣಿ, ಶಾಸ್ತ್ರಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Back to top button