ಚಿತ್ರಗಿಯಲ್ಲಿಯೇ 2 ಪಾಸಿಟಿವ್
ಕೊಡ್ಕಣಿಯಲ್ಲಿ 1 ಕೇಸ್
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು ನಾಲ್ಕು ಕರೊನಾ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಪಟ್ಟಣದ ಚಿತ್ರಗಿಯಲ್ಲಿಯೇ ಮೂರು ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಚಿತ್ರಗಿಯ 54 ವರ್ಷದ ಮಹಿಳೆ, ಚಿತ್ರಗಿಯ 6 ವರ್ಷದ ಬಾಲಕಿ, ಚಿತ್ರಗಿಯ 27 ವರ್ಷದ ಯುವತಿಗೆ ಕರೋನಾ ಪಾಸಿಟಿವ್ ಬಂದಿದೆ. ಹಾಗೂ ಕುಮಟಾ ತಾಲೂಕಿನ ಕೋಡ್ಕಣಿಯ 32 ವರ್ಷದ ಪುರುಷನಲ್ಲಿಯೂ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.
ಈ ನಾಲ್ವರು ಕೂಡ ಹೊರ ದೇಶ ಅಥವಾ ಹೊರ ರಾಜ್ಯಗಳಿಂದ ಬಂದವರಲ್ಲವಾಗಿದ್ದು, ಈ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ಹೇಳಲಾಗಿದೆ.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ