ಚೈನಾ ಸೆಟ್ಟಿನ ಗ್ಯಾರಂಟಿ ಕಾರ್ಡಿಗೂ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿಗೂ ಏನೂ ವ್ಯತ್ಯಾಸ ಇಲ್ಲ – ಗ್ಯಾರಂಟಿ ಕಾರ್ಡಿಗೇ ಗ್ಯಾರಂಟಿಯೇ ಇಲ್ಲ – ಹೊನ್ನಾವರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೇವಡಿ
ಹೊನ್ನಾವರ: 75 ವರ್ಷ ರಾಜಕಾರಣ ಮಾಡಿದ ರಾಜಕೀಯ ಪಕ್ಷ ,, ಜನ ತಮ್ಮನ್ನು ನಂಬುವುದಿಲ್ಲ ಎಂದು ಗೊತ್ತಾಗಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಟ್ಟು ನಂಬಿಸುವ ಸ್ಥಿತಿಗೆ ತಲುಪಿದೆ. ಚೈನಾ ಸೆಟ್ಟಿನ ಗ್ಯಾರಂಟಿ ಕಾರ್ಡಿಗೂ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿಗೂ ಏನೂ ವ್ಯತ್ಯಾಸ ಇಲ್ಲ. ಗ್ಯಾರಂಟಿ ಕಾರ್ಡಿಗೇ ಗ್ಯಾರಂಟಿ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಹೊನ್ನಾವರ ಪಟ್ಟಣದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಗಾರಂಟಿ ಕಾರ್ಡ್ ಕೊಡದೇ ಬಡವರ ಕೆಲಸ ಮಾಡಿದೆ. ರಾಜ್ಯದಲ್ಲಿ 54 ಲಕ್ಷ ಕುಟುಂಬಗಳಿಗೆ ಅರ್ಜಿ ಹಾಕದೇ ಕೇಂದ್ರ ಸರಕಾರ 6 ಸಾವಿರ, ರಾಜ್ಯ ಸರಕಾರ 4 ಸಾವಿರ ಸೇರಿ 10 ಸಾವಿರ ಕಿಸಾನ್ ಸಮ್ಮಾನ ಯೋಜನೆಯಡಿ ಅವರ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡುತ್ತಿದೆ. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷಿ ಯೋಜನೆ ಜಾರಿಗೆ ತಂದಿದೆ. ಯಾವುದಕ್ಕೂ ಗ್ಯಾರಂಟಿ ಕಾರ್ಡ್ ಕೊಡದೇ ಮಾಡಿದ್ದೇವೆ ಎಂದು ಹೇಳಿದರು. ಪ್ರಥಮಬಾರಿಗೆ ಬಿಜೆಪಿ ಸರಕಾರ ನಾರಾಯಣ ಗುರು ನಿಗಮ ಸ್ಥಾಪಿಸಿದೆ. ನಾರಾಯಣ ಗುರು ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿದೆ.
ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಬಗ್ಗೆ ದಿನಕರ ಶೆಟ್ಟಿ ಹಾಗೂ ಉಳಿದ ಶಸಕರು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿ ಕಳೆದ ಬಜೆಟ್ಟಿನಲ್ಲಿ ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಾಡುತ್ತೇವೆಂದು ಘೋಷಿಸಿದ್ದಾರೆ. ಸರಕಾರದ ಮೇಲೆ ಒತ್ತಡ ತಂದು ಘೋಷಣೆ ಮಾಡಿಸುವ ಕೀರ್ತಿ ದಿನಕರ ಶೆಟ್ಟಿಯವರಿಗೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಲ್ಲುತ್ತದೆ ಎಂದರು. ಬಿಜೆಪಿ ಅಭ್ಯರ್ಥಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಅಭಿವೃದ್ದಿಯ ಕಾರ್ಯಗಳ ಆಧಾರದಲ್ಲಿಯೇ ಗೆಲ್ಲುತ್ತೇನೆ. 1800 ಕೋಟಿ ರೂ. ಅನುದಾನವನ್ನು ಗಳನ್ನು ನನ್ನ ಕ್ಷೇತ್ರಕ್ಕೆ ಕೊಟ್ಟಿರುವುದು ಸ್ವಾತಂತ್ರö್ಯ ಬಂದು 75 ವರ್ಷಗಳಲ್ಲಿ ಇತಿಹಾಸ. ಎಲ್ಲ ಕಡೆಗೂ ಗುಣಮಟ್ಟದ ಕಾಮಗಾರಿಗಳಾಗಿವೆ. ಗ್ರಾಮೀಣ ಪ್ರದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ರಸ್ತೆಗಳನನು ಮಾಡಿದ್ದೇವೆ. ಹಿಂದಿನ ಸರಕಾರ ಶರಾವತಿ ಕುಡಿಯುವ ನೀರಿನ ಯೋಜನೆಯನ್ನು ಮಂಜೂರಿ ಮಾಡಿಸಿತ್ತು ಅಷ್ಟೇ. ಟೆಂಡರ್ ಮಾಡಿರಲಿಲ್ಲ. ನಾನು ಅದಕ್ಕೆ ಟೆಂಡರ್ ಮಾಡಿಸಿ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಕೊಡಿಸಿ ಈಗ ಮುಗಿಯುವ ಹಂತದಲ್ಲಿದೆ. 130 ಕೋಟಿ ರೂ. ವೆಚ್ಚದಲ್ಲಿ ಕರ್ಕಿ, 169 ಕೋಟಿ ರೂ. ವೆಚ್ಚದಲ್ಲಿ ಹೆಗಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಟೆಂಡರ್ ಮಾಡಿಸಿ ಶಂಕುಸ್ಥಾಪನೆಯಾಗಿವೆ. ಈ ಎರಡು ಯೋಜನೆಗಳಿಂದ ಬಹುತೇಕ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಜನರು ಮುಖವನ್ನೇ ನೋಡಿರದಂತವರು ಈ ಕ್ಷೇತ್ರಕ್ಕೆ ಬಂದು ಗೆಲ್ಲುತ್ತೇನೆ ಅನ್ನುತ್ತಿದ್ದಾರೆ. ಜನರಿಗೆ ದುಡ್ಡು ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ ಆಳ್ವ ಅವರ ವಿರುದ್ಧ ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಗೋವಾದ ಶಾಸಕ ಕೃಷ್ಣ ಸಾಲ್ಕರ, ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿ, ಮಂಜುನಾಥ ನಾಯ್ಕ, ಎಂ.ಜಿ.ನಾಯ್ಕ, ಎಂ.ಎಸ್.ಹೆಗಡೆ ಕಣ್ಣಿಮನೆ, ವಿನೋಧ ನಾಯ್ಕ ರಾಯಲಕೇರಿ, ಮಂಜುನಾಥ ನಾಯ್ಕ ಗೇರುಸೋಪ್ಪಾ, ಶಿವರಾಜ ಮೇಸ್ತಾ, ಗಣೇಶ ಪೈ, ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ