ಸಿದ್ದಾಪುರ : ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಮಾವೇಶಕ್ಕೆ ಜನರನ್ನು ನೀತಿ ಸಂಹಿತೆ ಉಲ್ಲಂಘಿಸಿ, ಬಸ್ಸಿನಲ್ಲಿ ಕರೆದುಕೊಂಡು ಹೋದ 15 ಜನರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 5 ರಂದು ಸಿರ್ಸಿ ವಿಧಾನಸಭಾ ಕ್ಷೇತ್ರದಿಂದ ಅಂಕೋಲಾ ಕ್ಕೆ 46 ಬಸ್ಸುಗಳಲ್ಲಿ ಪಿಎಂ ಮೋದಿ ಅವರ ಬಿಜೆಪಿ ಸಮಾವೇಶಕ್ಕೆ ಯಾವುದೇ ಅನುಮತಿಯನ್ನು ಪಡೆಯದೆ ಜನರನ್ನ ಕರೆದುಕೊಂಡು ಹೋಗಿದ್ದು ಚುನಾವಣಾ ಫ್ಲೈಯಿಂಗ್ ಸ್ಕೋಡ್ ಅಧಿಕಾರಿ ದೂರು ದಾಖಲಿಸಿದ್ದಾರೆ.
ತಿಮ್ಮಪ್ಪ ಮಡಿವಾಳ ಹಾರೆಕೊಪ್ಪ, ಆದರ್ಶ ಪೈ ಬಿಳಗಿ, ಮಹಾಬಲೇಶ್ವರ ಹೆಗಡೆ ಕಾನಸೂರು, ಗಿರೀಶ್ ಶೆಟ್ ಆಲ್ಮನೆ , ಧರ್ಮೇಶ ಶಿರಳಗಿ, ಗಣಪತಿ ಬಂಡಾರಿ ಶಿರಳಗಿ, ತಿಮ್ಮಯ್ಯ ಮರಿಯ ಕವಚೂರು ಶಿವಾನಂದ್ ಮಡಿವಾಳ ಬಿಳಗಿ, ರಮಾನಂದ್ ಮಡಿವಾಳ ಬಿಳಗಿ, ರಾಜ ರಾಮ್ ಹೆಗಡೆ ಬಿಳೆಕೈ, ಪ್ರಸನ್ನ ಹೆಗಡೆ ನಿರ್ಗನ್, ವಿನಾಯಕ್ ಹೆಗಡೆ ಗೋಳಗೋಡ್, ಚಂದ್ರಶೇಖರ್ ಗೌಡ ಹುಲ್ಕುತ್ರಿ, ದೇವೇಂದ್ರ ನಾಯ್ಕ ಬೇಡ್ಕಣಿ, ಪ್ರದೀಪ್ ಹೆಗಡೆ ಕೆಳಗಿನ ಕರ್ಜಗಿ ಎನ್ನುವವರ ಮೇಲೆ ದೂರು ದಾಖಲಾಗಿದೆ.
ವಿಸ್ಮಯ ನ್ಯೂಸ್ ದಿವಾಕರ ಸಂಪಕಂಡ, ಸಿದ್ದಾಪುರ