Important
Trending

ಕಿಲಾಡಿ ಅಂತರ್ ಜಿಲ್ಲಾ ಕಳ್ಳ ಅಂದರ್

ಹಿoದಿನಬಾಗಿಲು ದೂಡಿ ಚಿಲಕ ತೆಗೆದು ಮನೆಯ ಒಳಗೆ ಪ್ರವೇಶಿಸುತ್ತಿದ್ದ
ಮನೆಯವರು ಮನೆಯಲ್ಲಿದ್ದಾಗಲೇ ಕಳ್ಳತನ ಮಾಡುತ್ತಿದ್ದ!

ಮುಂಡಗೋಡ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ರಾತ್ರಿ ವೇಳೆಯಲ್ಲಿ ಮನೆಯ ಜನರು ಮಲಗಿರುವಾಗಲೇ ಮನೆಯ ಹಿಂದಿನ ಬಾಗಿಲನ್ನು ದೂಡಿ ಚಿಲಕ ತೆಗೆದು ಮನೆಯ ಒಳಗೆ ಪ್ರವೇಶಿಸಿ ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಇತ್ತಿಚೆಗೆ ಮುಂಡಗೋಡ ಠಾಣಾ ವ್ಯಾಪ್ತಿಯ ಮೈನಳ್ಳಿಯಲ್ಲಿ ಒಂದೇ ದಿನ ಎರಡು ಮನೆ ಕಳ್ಳತನವಾಗಿದ್ದು ಆರೋಪಿಯು ಕಳುವು ಮಾಡುವಾಗ ಮನೆಯ ಜನರು ಎಚ್ಚರವಾಗಿ ಅವನನ್ನು ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರಾದರೂ ಆರೋಪಿಯು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಅದರಂತೆ ಕೂಡಲೇ ಕಾರವಾರ ಜಿಲ್ಲಾ ಮಾನ್ಯ ಎಸ್.ಪಿ. ಸಾಹೇಬರು, ಮಾನ್ಯ ಹೆಚ್ಚುವರಿ ಎಸ್.ಪಿ. ಸಾಹೇಬರು ಮತ್ತು ಮಾನ್ಯ ಶಿರಸಿ ಡಿ.ಎಸ್.ಪಿ. ರವರು ಮುಂಡಗೋಡ ಠಾಣಾ ಪೊಲೀಸ್ ನಿರೀಕ್ಷಕರ ನೇತ್ರತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಆರೋಪಿಯನ್ನು ಪತ್ತೆ ಹಚ್ಚಲು ಬಲೆ ಬೀಸಲಾಗಿತ್ತು. ದಿನಾಂಕ 27-10-2020 ರಂದು ಆರೋಪಿಯನ್ನು ಪತ್ತೆ ಹಚ್ಚಿದ್ದು ಅವನು ವಿಚಾರಣೆಯಲ್ಲಿ 2018 ರಿಂದ ಇಲ್ಲಿಯವರೆಗೆ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದನು.

ಈಗ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅವನಿಂದ ಕಳವು ಮಾಡಿದ ಬಂಗಾರದ ಆಭರಣ ಸೇರಿ ಒಟ್ಟು 5 ಲಕ್ಷ ರೂ ಕಿಮ್ಮತ್ತಿನ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಜಪ್ತಪಡಿಸಿಕೊಳ್ಳಲಾಗಿದೆ.


ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಬದರಿನಾಥ, ಮತ್ತು ಶಿರಸಿ ಡಿ.ಎಸ್.ಪಿ. ಜಿ. ಟಿ. ನಾಯಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಭುಗೌಡ. ಡಿ. ಕೆ, ಮಹಿಳಾ ಪಿ.ಎಸ್.ಐ. ಮೋಹಿನಿ ಶೆಟ್ಟಿ. ಪಿ.ಎಸ್.ಐ. ಬಸವರಾಜ ಮಬನುರ, ಎ.ಎಸ್.ಐ. ಅಶೋಕ ರಾಠೋಡ, ಎ.ಎಸ್.ಐ. ಖೀರಪ್ಪಾ ಘಟಕಾಂಬಳೆ, ಎ.ಎಸ್.ಐ. ಶೇಡಜಿ ಚವ್ಹಾಣ ಹಾಗೂ ಸಿಬ್ಬಂದಿಯವರಾದ ಧರ್ಮರಾಜ ನಾಯ್ಕ, ರಾಘವೇಂದ್ರ ನಾಯ್ಕ, ಭಗವಾನ ಗಾಂವಕರ, ವಿನೋದಕುಮಾರ, ಜಿ. ಬಿ. ಅರುಣ ಬಾಗೇವಾಡಿ, ಶರತ ದೇವಳಿ, ತಿರುಪತಿ ಚೌಡಣ್ಣವರ, ವಿವೇಕ ಪಟಗಾರ ಇವರು ಆರೋಪಿಯನ್ನು ಹಿಡಿದು ಹಲವು ವರ್ಷಗಳಿಂದ ಆದ ಮನೆಕಳ್ಳತನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯವನ್ನು ಮಾನ್ಯ ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button