
ಹೊನ್ನಾವರ: ತಾಲೂಕಿನಲ್ಲಿ ಇತ್ತಿಚೆಗೆ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಭಟ್ಕಳ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ ಹಲವೆಡೆ ಕಳ್ಳರು ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ. ಈಗ ಹೊನ್ನಾವರ ತಾಲೂಕಿನ ಕಾಸರಕೋಡದ ದೇವಸ್ಥಾನವೊಂದರ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ದೇವರ ಕೊರಳಿನಲ್ಲಿದ್ದ ಸರವನ್ನೇ ಕದ್ದೊಯ್ದಿದ್ದಾರೆ.
ಹೌದು, ತಾಲೂಕಿನ ಕಾಸರಕೋಡ ಹಿರೆಮಠ ವೀರ ಮಾರುತಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯ ಅಂದಾಜು 7 ಸಾವಿರ ನಗದು, ದೇವರ ಕೊರಳಿನ 20 ಗ್ರಾಂ ತೂಕದ 80 ಸಾವಿರ ಮೌಲ್ಯದ ಬಂಗಾರದ ಸರವು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Sandalwood: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧದ ತುಂಡುಗಳು ವಶಕ್ಕೆ: ಆರೋಪಿ ಪರಾರಿ
- ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ: ಮಹಾದೇವ ಬಿ ಗೌಡ ರಾಜ್ಯಮಟ್ಟಕ್ಕೆ ಆಯ್ಕೆ
- Yakshagana: ಮಲೆನಾಡಿನ ಕೋಗಿಲೆ ಎಂದೇ ಖ್ಯಾತರಾದ,ಅದ್ಭುತ ಕಂಠಸಿರಿಯ ಖ್ಯಾತ ಯಕ್ಷಗಾನ ಭಾಗವತ ಹೃದಯಾಘಾತದಿಂದ ನಿಧನ
- ಗಮನಸೆಳೆಯುತ್ತಿದ್ದಾನೆ ‘ಸೈಂಟಿಸ್ಟ್ ಗಣೇಶ’! ಗಣೇಶೋತ್ಸವದಲ್ಲಿ ಚಂದ್ರಯಾನ ಮಾದರಿ
- ಬಿಜೆಪಿಯಿಂದ ಮಹಿಳೆಯರ ವಿಶೇಷ 33% ಮೀಸಲಾಯಿ ವಿಧೇಯಕಕ್ಕೆ ಅಭಿನಂದನೆ: ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮ