Info
Trending

ಭಟ್ಕಳದಲ್ಲಿ ರಕ್ತದಾನ ಶಿಬಿರ

ಭಟ್ಕಳ : ಭಟ್ಕಳ ಪೊಲೀಸ್ ಇಲಾಖೆ (ಶಹರ ಠಾಣೆ, ಗ್ರಾಮೀಣ ಠಾಣೆ ಹಾಗೂ ಮುರ್ಡೇಶ್ವರ ಠಾಣೆ), ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಹಾಗೂ ಭಟ್ಕಳ ಸರ್ಕಾರಿ ಆಸ್ಪತ್ರೆಯ ವಾಟ್ಸಪ್ ಗ್ರೂಪ್ ನ ನೇತೃತ್ವದಲ್ಲಿ ಹಾಗೂ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಉಡುಪಿ ಬ್ಲಡ್ ಬ್ಯಾಂಕ್ ನ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು
08-11-2020 ರ ರವಿವಾರ ದಂದು ಬೆಳಿಗ್ಗೆ 09-00 ಗಂಟೆ ಯಿಂದ ಭಟ್ಕಳ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ನಡೆಯಲಿದೆ.

ಈ ಒಂದು ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು, ರಕ್ತದಾನ ಮಾಡಿ ನಮ್ಮ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಭಟ್ಕಳದ ಜನತೆಗೆ ಅವಶ್ಯವಿರುವ ರಕ್ತ ಶೇಖರಣೆಗೆ ಸಹಕರಿಸಬೇಕಾಗಿ ಕಳಕಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button