ಕನ್ನಡ ಬಳಸಿ ಪರಿಸರ ಉಳಿಸಿ ಎಂದ ನಿವೃತ್ತ ಶಾಲಾ ತಪಾಸಣಾ ಅಧಿಕಾರಿ: ಪಿ.ಎಂ ಜ್ಯೂನಿಯರ್ ಕಾಲೇಜ್ ನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ
ಅಂಕೋಲ: ಮಕ್ಕಳಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅರಿವು ಇರಬೇಕು. ಜೊತೆಗೆ ಪರಿಸರ ಉಳಿಸುವ ಕಾಳಜಿಯೂ ಇರಬೇಕು. ಇಂದಿನ ಮಕ್ಕಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಹಳೆಗನ್ನಡ ಕಾವ್ಯದ ಓದು ಅಗತ್ಯ ಎಂದ ನಿವೃತ್ತ ಶಾಲಾ ತಪಾಸಣಾ ಅಧಿಕಾರಿ ಕೇ ಎನ್ ನಾಯಕ ( ಕಾಳಪ್ಪ ಮಾಸ್ತರ) ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಪಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ ಹಾಗೂ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿದರು. ,ಅರಣ್ಯ ಇಲಾಖೆಯ ಲಕ್ಷ ವೃಕ್ಷಾಂದೋಲನ ಕಾರ್ಯಕ್ರಮದ ಕುರಿತು ಮಾತನಾಡಿದ ಅಂಕೋಲಾ ವಲಯ ಅರಣ್ಯಾಧಿಕಾರಿ ಜಿ ವಿ ನಾಯಕ, ಪರಿಸರದ ಕಾಳಜಿ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ ಕೆ ನಾಯ್ಕ ,ಸದಸ್ಯೆ ಶ್ರೀಮತಿ ಭಾಗಿರತಿ ಹೆಗಡೆಕಟ್ಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು..ಪ್ರಾಚಾರ್ಯ ಫಾಲ್ಗುಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಕೇ ಎನ್ ನಾಯಕ ದಂಪತಿಗಳು ತಮ್ಮ ಮಗ ದಿ. ಪ್ರಭಾಕರ ನಾಯಕ ಸ್ಮರಣಾರ್ಥ ಕಾಲೇಜಿಗೆ ನೀಡಿದ ಉತ್ತಮ ಗುಣಮಟ್ಟದ ಪಾಠೋಪಕರಣ (ಹಲಗೆ) ಯನ್ನು ಉದ್ಘಾಟಿಸಲಾಯಿತು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ರಮಾಮನಂದ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯೂನಿಯನ್ ಉಪಾಧ್ಯಕ್ಷ ಉಲ್ಲಾಸ ಹುದ್ದಾರ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಮುನ್ನೋಟ ವಿವರಿಸಿ, ಅತಿಥಿಗಳನ್ನು ಪರಿಚಯಿಸಿದರು.ಉಪನ್ಯಾಸಕ ರಮೇಶ್ ಗೌಡ ಉಪಕಾರ ಸ್ಮರಿಸಿದರು. ಉಪನ್ಯಾಸಕಿ ಶ್ರೀಮತಿ ರೇಷ್ಮಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಜಿಮಖಾನ ಉಪಾಧ್ಯಕ್ಷ ಶ್ರೀನಿವಾಸ್ ಯು ಕೆ ಸಹಕರಿಸಿದರು. ಕಚೇರಿ ಸಿಬ್ಬಂದಿ ವಿನಾಯಕ ನಾಯ್ಕ, ಗಣಪತಿ ಗೌಡ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ