ಸಿದ್ದಾಪುರ: ತಾಲೂಕಿನಾದ್ಯಂತ ಗದ್ದೆ ನಾಟಿ ಕಾರ್ಯವು ಸಂಪೂರ್ಣವಾಗಿ ಮುಗಿಯುವ ಹಂತಕ್ಕೆ ತಲುಪಿದ್ದು, ಹಲವೆಡೆ ಗದ್ದೆಗಳು ಹಸಿರು ಹೊಡೆಯುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಕಾಡು ಪ್ರಾಣಿಗಳು ರೈತರು ಬೆಳೆದ ಬೆಳೆಗಳನ್ನು ತಿಂದು ನಾಶಪಡಿಸುತ್ತೇವೆ . ಮೊದಲೇ ಮಳೆಯ ಕೊರತೆ ನಡುವೆಯೂ ಹಾಗೋ ಹೀಗೊ ರೈತರು ಗದ್ದೆ ನಾಟಿ ಮಾಡಿ ಕಳೆ ತೆಗೆದು ಗೊಬ್ಬರ ಹಾಕಿ ಪೈರಿನ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಕಾಡುಕೋಣಗಳ ಹಾವಳಿಯು ರೈತರ ನಿದ್ದೆಗೆಡಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣ ಹಾವಳಿಯನ್ನು ನಿಯಂತ್ರಿಸಬೇಕು ಮತ್ತು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಕೂಡಲೇ ಸರ್ಕಾರಕ್ಕೆ ವರದಿ ನೀಡಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳಿಂದ ರೈತರಿಗೆ ತೊಂದರೆಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಯುವ ಮುಖಂಡ ಹರೀಶ ನಾಯ್ಕ್ ಹಸ್ವಿಗೊಳಿ ಒತ್ತಾಯ ಮಾಡಿದ್ದಾರೆ.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ