117 ಮಂದಿ ಗುಣಮುಖರಾಗಿ ಬಿಡುಗಡೆ
ಶಿರಸಿ, ಹಳಿಯಾಳದಲ್ಲಿ ಅತಿಹೆಚ್ಚು ಕೇಸ್ ದಾಖಲು
ಕುಮಟಾದಲ್ಲಿಂದು ನಾಲ್ಕು ಪಾಸಿಟಿವ್
ಹೊನ್ನಾವರದಲ್ಲಿ ಇಬ್ಬರಿಗೆ ಸೋಂಕು
ಕಾರವಾರ: ಸತತವಾಗಿ ಏರುತ್ತಿರುವ ಕರೊನಾ ಸೋಂಕಿನ ನಡುವೆಯೂ ಗುಣಮುಖರಾಗುವವರ ಸಂಖ್ಯೆ ಕೂಡಾ ಏರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಉತ್ತರಕನ್ನಡದಲ್ಲಿಂದು 117 ಮಂದಿ ಗುಣಮುಖರಾಗಿ ಬಿಡುಗಡೆಯಾದರೆ, 75 ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ. ಶಿರಸಿ ಮತ್ತು ಹಳಿಯಾಳದಲ್ಲಿ ಅತಿಹೆಚ್ಚು ಕೇಸ್ ದಾಖಲಾಗಿದೆ. ಇಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಹಳಿಯಾಳದಲ್ಲಿ 37, ಶಿರಸಿಯಲ್ಲಿ 21 ಕೇಸ್ ದಾಖಲಾಗಿದೆ. ಕಾರವಾರ 5, ಅಂಕೋಲಾ 4, ಕುಮಟಾ 3, ಭಟ್ಕಳ 1, ಯಲ್ಲಾಪುರದಲ್ಲಿ ಒಂದು ಕೇಸ್ ದಾಖಲಾಗಿದೆ.
ಇದೇ ವೇಳೆ ಇಂದು ಸೋಂಕಿತರ ಸಂಖ್ಯೆಗಿoತಲೂ ಅತಿಹೆಚ್ಚು ಅಂದರೆ 116 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹಳಿಯಾಳದಲ್ಲಿ 65, ಕಾರವಾರ 23, ಭಟ್ಕಳ 16, ಹೊನ್ನಾವರ 1, ಮುಂಡಗೋಡ 6, ಜೋಯ್ಡಾದಲ್ಲಿ ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 150 ಮಂದಿ ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
( ಸೂಚನೆ: ಈ ಮೇಲಿದ್ದು ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದ ಮಾಹಿತಿ, ಕೆಲ ಮಾಹಿತಿ ವಿಳಂಬ ವಾಗಬಹುದು, ಅಥವಾ ನಾಳೆ ಬರಬಹುದು )
ಕುಮಟಾದಲ್ಲಿಂದು ನಾಲ್ಕು ಪಾಸಿಟಿವ್:
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು ನಾಲ್ಕು ಕರೊನಾ ಪಾಸಿಟಿವ್ ಪ್ರಕರಣ ಕಂಡುಬAದಿದೆ. ಅಳ್ವೆಕೋಡಿ, ಗೋಕರ್ಣ, ವನ್ನಳ್ಳಿ, ಬಾಡದಲ್ಲಿ ತಲಾ ಒಂದೊoದು ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಕುಮಟಾ ತಾಲೂಕಿನ ಅಳ್ವೆಕೋಡಿಯ 43 ವರ್ಷದ ಪುರುಷ, ಗೋಕರ್ಣದ 63 ವರ್ಷದ ಮಹಿಳೆ, ವನ್ನಳ್ಳಿಯ 70 ವರ್ಷದ ವೃದ್ಧ, ಬಾಡದ 37 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಈ ನಾಲ್ವರು ಕೂಡ ಈ ಹಿಂದೆ ಸೋಂಕು ತಗುಲಿದ್ದವರ ಪ್ರಾರ್ಥಮಿಕ ಸಂಪರ್ಕಕ್ಕೆ ಬಂದರು ಎಂಬ ಮಾಹಿತಿ ಬಂದಿದೆ.
1) ಕುಮಟಾ: ಅಳ್ವೆಕೋಡಿ, ಗೋಕರ್ಣ, ವನ್ನಳ್ಳಿ, ಬಾಡದಲ್ಲಿ ಕಾಣಿಸಿಕೊಂಡ ಸೋಂಕು
2) ಹೊನ್ನಾವರ: ಪ್ರಭಾತನಗರ, ಉಪ್ಪೋಣಿ ಭಾಗದಲ್ಲಿ ಸೋಂಕು ಪತ್ತೆ
ಹೊನ್ನಾವರದಲ್ಲಿ ಇಬ್ಬರಿಗೆ ಸೋಂಕು:
ಹೊನ್ನಾವರ: ತಾಲೂಕಿನಲ್ಲಿ ಇಂದು ಎರಡು ಕರೊನಾ ಪಾಸಿಟಿವ್ ದೃಢಪಟ್ಟಿದೆ. ಪಟ್ಟಣದ ಪ್ರಭಾತನಗರದ 40 ವರ್ಷದ ಪುರುಷ, ಉಪ್ಪೋಣಿಯ 64 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಕರೊನಾ ದೃಢಪಟ್ಟ ಇಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 219 ಏರಿಕೆಯಾಗಿದ್ದು, ಇಂದು 8 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 16 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 36 ಸೋಂಕಿತರು ಹೋಮ್ ಐಷೋಲೇಷನ್ ನಲ್ಲಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್