ಭಟ್ಕಳ: ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿಗೆ ಅನಾಮಿಕ ವ್ಯಕ್ತಿಯೋರ್ವರು ವಾಟ್ಸಪ್‌ನಲ್ಲಿ ಜೀವ ಬೆದರಿಕೆಯ ಸಂದೇಶಗಳನ್ನು ರವಾನಿಸಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಕಳೆದ ಸೆಪ್ಟೆಂಬರ್ 19ರ ರಾತ್ರಿ ಆರ್‌ಎಫ್‌ಓ ಶರತ್ ಶೆಟ್ಟಿ ಗೆ ಕಾಲ್ ಬಂದಿದ್ದು, ವೈಯಕ್ತಿಕ ಜೀವನ, ಸಾರ್ವಜನಿಕರೊಂದಿಗಿನ ಸಂಬoಧ ಮತ್ತು ವೃತ್ತಿ ಜೀವನವನ್ನು ಹಾಳುಮಾಡುತ್ತೇವೆ ಎಂದು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ.
Google News ನಲ್ಲಿ ವಿಸ್ಮಯ ಟಿವಿಯನ್ನು ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.
ತಾನು ಕಳೆದ 5 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಭಟ್ಕಳದಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವಾರು ಅತಿಕ್ರಮಣ ಖುಲ್ಲಾ ಪಡಿಸಲಾಗಿದೆ. ಅಲ್ಲದೇ ಹಗಲು ರಾತ್ರಿ ಎನ್ನದೇ ಅರಣ್ಯದಲ್ಲಿ ನಡೆಯುತ್ತಿದ್ದ ಹಲವಾರು ಅಕ್ರಮಗಳನ್ನು ತಡೆದು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಸದರಿ ಶಿಕ್ಷೆಗಳಿಗೆ ಒಳಪಟ್ಟವರ ಪೈಕಿ ಯಾರೋ ತನ್ನ ಆತ್ಮಸ್ಥೆರ್ಯ ಕುಗ್ಗಿಸಲು ಈ ರೀತಿ ಮಾಡಿರಬಹುದು. ಈ ಸಂದೇಶಗಳಿoದ ತಾನು ಮಾನಸಿಕವಾಗಿ ನೊಂದಿರುವುದಾಗಿ ಶರತ್ ಶೆಟ್ಟಿ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ