ಸರಳ ಕಾರ್ಯಕ್ರಮದಲ್ಲಿಯೂ ಸಂಭ್ರಮಪಟ್ಟ ಅಂಕೋಲಿಗರು
ಎಲ್ಲೆಡೆ ಹಾರಾಡಿದ ತಿರಂಗ
ಅಂಕೋಲಾ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಕರ್ನಾಟಕದ ಬಾರ್ಡೋಲಿ ಎಂದೇ ಹೆಸರಾದ ಅಂಕೋಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಹಸೀಲ್ದಾರ ಕಾರ್ಯಾಲಯ : ಧ್ವಜ ಕಟ್ಟೆಯನ್ನು ಶೃಂಗರಿಸಲಾಗಿತ್ತು. ಕೇಸರಿ, ಬಿಳಿ, ಹಸಿರು ರಿಬ್ಬನ್ ಪಟ್ಟಿಗಳು ಮೆರಗು ನೀಡಿದ್ದವು. ಗಾಂಧೀಜಿ ಮತ್ತು ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ತಹಸೀಲ್ದಾರ ಉದಯ ಕುಂಬಾರ, ಪೊಲೀಸ್ ಗೌರವ ಸ್ವೀಕರಿಸಿ ಧ್ವಜಾರೋಹಣ ನಡೆಸಿದರು. ಶಿರಸ್ತೆದಾರ ಎಮ್.ಬಿ ಗುನಗಾ ಸಹಕರಿಸಿದರು. ಕಂದಾಯ ಮತ್ತು ಭೂಮಾಪನಾ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಪುರಸಭೆ ಕಾರ್ಯಲಯ : ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಧ್ವಜಾರೋಹಣ ನಡೆಸಿದರು. ಸದಸ್ಯರಾದ ಪ್ರಕಾಶ ಗೌಡ, ವಿಶ್ವನಾಥ ನಾಯ್ಕ, ಕಾರ್ತಿಕ ನಾಯ್ಕ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕಾ ಪಂಚಾಯತ್ : ಕಾರ್ಯನಿರ್ವಾಹಕಾಧಿಕಾರಿ ಪಿ.ವೈ ಸಾವಂತ್ ವಿಶೇಷ ಉತ್ಸುಕತೆಯಿಂದ ತಾ.ಪಂ ಕಾರ್ಯಲಯದ ಆವರಣ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿತ್ತು. ಅಧ್ಯಕ್ಷ ಸುಜಾತಾ ಗಾಂವಕರ ಧ್ವಜಾರೋಹಣ ನೆರವೇರಿಸಿದರು. ದೇವರಾಯ ಗೋಳಿಕಟ್ಟೆ ಸಹಕರಿಸಿದರು. ಮಂಜುನಾಥ ಡಿ. ನಾಯ್ಕ, ತುಳಸಿ ಗೌಡ, ಶಾಂತಿ ಆಗೇರ, ಪ್ರಿಯಾ ನಾಯ್ಕ, ನಂದಾ ನಾಯ್ಕ, ಸಂಜು ಕುಚಿನಾಡ, ಬೀರಾ ಗೌಡ ಮತ್ತಿತ್ತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಾಲಯದ ಸರ್ವ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಗಮನ ಸೆಳೆದರು. ನರೆಗಾ ಯೋಜನೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ 6 ಜನರನ್ನು ಗುರುತಿಸಿ ಗೌರವಿಸಲಾಯಿತು.
ಸಮಾಜ ಮಂದಿರ : ಎದುರಿನ ಎತ್ತರದ ಧ್ವಜಸ್ತಂಭದಲ್ಲಿ ನಿಂತು ಪುರಸಭೆಯ ಅಧ್ಯಕ್ಷರು ಧ್ವಜಾರೋಹಣ ನಡೆಸುವ ವಾಡಿಕೆ ಇತ್ತಾದರೂ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಈವರೆಗೂ ನಡೆಯದಿರುವದರಿಂದ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯೋತ್ಸವದ ಮಹತ್ವ ಮತ್ತು ಶುಭಾಷಯ ತಿಳಿಸಿದರು. ಸಿಬ್ಬಂದಿ ವಿಷ್ಣು ಗೌಡ ಸಹಕರಿಸಿದರು. ಜೈಹಿಂದ ವಾದ್ಯಮೇಳದವರು ಆಕರ್ಷಕವಾಗಿ ರಾಷ್ಟ್ರಗೀತೆ ನುಡಿಸಿದರು. ಗೋವಿಂದ ಮಾಸ್ತರ ನಿರೂಪಿಸಿದರು. ಪಿಎಸ್‍ಐ ಈ.ಸಿ ಸಂಪತ್ತ್ ಮತ್ತು ಸಿಬ್ಬಂದಿಗಳು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಗಾಂಧಿ ಮೈದಾನ : ಸ್ವಾತಂತ್ರ್ಯ ಸ್ಮಾರಕಭವನದ ಆವರಣದಲ್ಲಿರುವ ಉಧ್ಯಾನವನದ ಗಾಂಧಿ ಪ್ರತಿಮೆಗೆ ಸಿ.ಪಿ.ಐ ಕೃಷ್ಣಾನಂದ ನಾಯಕ, ಸ್ವಾತಂತ್ರ್ಯ ಯೋಧರ ಪ್ರತಿಮೆಗೆ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ ಉದಯ ಕುಂಬಾರ, ಹಿರಿಯರ ತ್ಯಾಗ ಬಲಿಧಾನಗಳನ್ನು ನೆನೆದು, ಪ್ರಸ್ತುತ ಸನ್ನಿವೇಷದಲ್ಲಿ ಕರೊನಾ ನಿಯಂತ್ರಣಕ್ಕೆ ಸರ್ವರೂ ಸಹಕರಿಸುವಂತೆ ಕರೆ ನೀಡಿದರು. ಖಾಕಿ ಪಡೆಗಳಾದ ಅಗ್ನಿಶಾಮಕಧಳ, ಗೃಹರಕ್ಷಕಧಳ, ಪೊಲೀಸ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಕೆ.ಎಲ್.ಇ ಸಂಸ್ಥೆಯವರು ರಾಷ್ಟ್ರಗೀತೆ ಹಾಡಿದರು.
- ಕರೊನಾ ಮತ್ತು ವಾರಿಯರ್ಸ್ : ಸ್ವಾತಂತ್ರ್ಯ ದಿನದಂದು ತಾಲೂಕಿನಲ್ಲಿ 33 ಜನರ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು ಯಾರಲ್ಲಿಯೂ ಸೋಂಕು ಧೃಡಪಡದಿರುವುದು ಸಮಾಧಾನಕರ ವಿಚಾರವಾಗಿದೆ. ಇದೇ ವೇಳೆ ಈ ಹಿಂದೆ ಕರೊನಾ ನಿಯಂತ್ರಣಕ್ಕೆ ಶ್ರಮಿಸಿದ ಕರೊನಾ ವಾರಿಯರ್ಸಗಳ ಪರವಾಗಿ ವೈದ್ಯ, ಪೊಲೀಸ್, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕ ಸಿಬ್ಬಂದಿಗಳು, ಅಂಬ್ಯುಲೆನ್ಸ್ ಡೈವರ ಮತ್ತಿತರ ಆರೋಗ್ಯ ಇಲಾಖೆ ನೌಕರರು ಸೇರಿದಂತೆ ಒಟ್ಟೂ 10 ಜನರನ್ನು ಸಾಂಕೇತಿಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
- ಡಾ.ಅರ್ಚನಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ, ಪ್ರಮುಖರಾದ ರಮಾನಂದ ನಾಯಕ, ಸುಭಾಶ ನಾರ್ವೇಕರ, ಕಾಳಪ್ಪ ಮಾಸ್ತರ, ವಿನೋದ ಶಾನಭಾಗ, ಉಮೇಶ ನಾಯ್ಕ, ನಾಗಾನಂದ ಬಂಟ್ ಮತ್ತಿತರರು ಉಪಸ್ಥಿತರಿದ್ದರು.
- ಭಾರತ ಸೇವಾಧಳದ ಹೊನ್ನಪ್ಪ ನಾಯಕ, ಮಂಜುನಾಥ ನಾಯಕ, ಶಿಕ್ಷಕ ರಫೀಕ್ ಶೇಖ್, ಕಂದಾಯ ಇಲಾಖೆಯ ರಾಘವೇಂದ್ರ ಜನ್ನು, ಭಾರ್ಗವ ನಾಯಕ ಮತ್ತಿತರರು ಸಹಕರಿಸಿರಿದರು.
ರಕ್ತದಾನ : ಮೈಕಾ ಸಂಘಟನೆವತಿಯಿಂದ ತಾಲೂಕಾಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರವಾರದ ರಕ್ತನಿಧಿ ಕೇಂದ್ರದ ಅರುಣ ನಾಯ್ಕ, ಸುಮಿತ್, ಶೈಲೇಂದ್ರ, ಬಾಲಕೃಷ್ಣ, ಯೋಗೇಶ, ಅಂಕೋಲಾದ ಆದರ್ಶ ನಾಯಕ ಮತ್ತಿತರ ಸಿಬ್ಬಂದಿಗಳು ರಕ್ತ ಸಂಗ್ರಹಿಸಿದರು. ಡಾ. ಈಶ್ವರಪ್ಪ, ಡಾ. ಮಹೇಂದ್ರ ನಾಯಕ, ಚೇತನ ನಾಯಕ, ರಂಜನ ನಾಯಕ, ಮಂಜುನಾಥ ನಾಯ್ಕ, ಗೋಪು ನಾಯ್ಕ, ಸಂಘಟನೆಯ ಪ್ರಮುಖ ಸುನೀಲ, ನಾಗರಾಜ ಮತ್ತಿತರರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಯ ಸದಸ್ಯರು ಸೇರಿದಂತೆ 30 ಯುನಿಟ್ ರಕ್ತದಾನ ಮಾಡಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಝೇಂಡಾಕಟ್ಟೆ : ಪ್ರಸಿದ್ದ ಝೇಂಡಾಕಟ್ಟೆಯಲ್ಲಿ ಕಾಂಜನ ಶೆಟ್ಟಿ ಕುಟುಂಬದ ಪರವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಎಂ.ಎಂ ಕರ್ಕಿಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತಾಲೂಕಿನ ಇತರೆಡೆ : ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು, ಪಕ್ಷದ ಕಛೇರಿ, ಬ್ಯಾಂಕ, ರಿಕ್ಷಾ, ಕಾರ್, ಟೆಂಪೋ ಮತ್ತಿತರಸಾರಿಗೆ ಯೂನಿಯನ್‍ಗಳು, ಮನೆ, ಅಂಗಡಿ ಮುಂಗಟ್ಟು ಸೇರಿದಂತೆ ನಾನಾ ಕಛೇರಿ ಒಳಗೊಂಡು ತಾಲೂಕಿನೆಲ್ಲೆಡೆ ಧ್ವಜಾರೋಹಣ ನೆರವೇರಿಸಿ ಗೌರವ ಸೂಜಿಸಲಾಯಿತು. ಕರೊನಾ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಪಥಸಂಚಲನ ಮೆರವಣಿಗೆ ಇರದೇ ಹಬ್ಬದ ಉತ್ಸಾಹ ಸ್ವಲ್ಪ ಕಡಿಮೆ ಎನಿಸಿದರೂ, ಅಂಕೋಲಿಗರ ದೇಶಭಕ್ತಿಯಿಂದಾಗಿ ಎಲ್ಲೆಡೆಯೂ ಸಂಭ್ರಮದ ವಾತಾವರಣ ಕಂಡು ಬಂತು. ಬೆಳಗಿನ ವೇಳೆ ಮಳೆರಾಯನ ಬೀಡುವು ಸಹ ಪೂರಕ ಎಂಬಂತ್ತಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ