Important
Trending

ದೇವಸ್ಥಾನದ ಬಾಗಿಲು ಮುರಿದು ದೇವರ ಕವಚ ಕದ್ದ ಕಳ್ಳರು

10 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಲೂಟಿ
ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ತೆರಳಿ ಪರಿಶೀಲನೆ

[sliders_pack id=”1487″]

ಕುಮಟಾ: ಇತ್ತಿಚೆಗೆ ದೇವಸ್ಥಾನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ತಾಲೂಕಿನ ಮೂರೂರು ಕೋಣಾರೆಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳ್ಳರು ಕನ್ನಹಾಕಿದ್ದಾರೆ. ದೇವರ ಕವಚಸೇರಿ 10 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ದೇವಸ್ಥಾನದ ಬಾಗಿಲು ಮುರಿದು ಕಳ್ಳರು ಈ ದುಷ್ಕøತ್ಯ ಮಾಡಿದ್ದಾರೆ.

  • ಕಳ್ಳತನದ ಸದ್ದು ಕೇಳಿ ಅರ್ಚಕರು ಕೂಗಿದ ವೇಳೆ ಓಡಿದ ದುಷ್ಕರ್ಮಿಗಳು

ಕಳ್ಳತದ ವೇಳೆ ಸದ್ದು ಕೇಳಿಸಿದ್ದು, ಈ ವೇಳೆ ಎಚ್ಚರವಾದ ಅರ್ಚಕರು, ಕಳ್ಳರನ್ನು ಕಂಡಿದ್ದಾರೆ. ಕೂಡಲೇ ಜೋರಾಗಿ ಕೂಗಿದ್ದು, ಇದರಿಂದ ಭಯಗೊಂಡ ಕಳ್ಳರು ಕೈಗೆ ಸಿಕ್ಕಷ್ಟು ದೋಚಿ ತಪ್ಪಿಸಿಕೊಂಡು ಪರಾರಿಯಾಗಿದಾರೆ ಎಂಬ ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button